ಸಂಗೀತಕ್ಕೆ ಎಂಥವರನ್ನು ಸೆಳೆಯುವ ಗುಣವಿದೆ

ತುಮಕೂರಿನಲ್ಲಿ ಕರ್ನಾಟಕ ವಿಕಾಸ ರಂಗ ಆಯೋಜಿಸಿದ್ದ "ಶಾಸ್ತ್ರೀಯ ಸಂಗೀತೋತ್ಸವ'ವನ್ನು ಮುರಳೀಧರ ಹಾಲಪ್ಪ ಉದ್ಘಾಟಿಸಿದರು. ಮುರಳಿಕೃಷ್ಣಪ್ಪ, ಕೆ.ಎಸ್​.ಸಿದ್ದಲಿಂಗಪ್ಪ, ವ.ಚ.ಚನ್ನೇಗೌಡ, ಮಹದೇವಪ್ಪ, ಪ್ರೊ.ಚಂದ್ರಣ್ಣ, ವಿ.ಎಂ.ಪ್ರಸನ್ನಕುಮಾರ್​, .ಡಿ.ಹನುಮಂತರಾಯಪ್ಪ, ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಇದ್ದರು.
ತುಮಕೂರಿನಲ್ಲಿ ಕರ್ನಾಟಕ ವಿಕಾಸ ರಂಗ ಆಯೋಜಿಸಿದ್ದ "ಶಾಸ್ತ್ರೀಯ ಸಂಗೀತೋತ್ಸವ'ವನ್ನು ಮುರಳೀಧರ ಹಾಲಪ್ಪ ಉದ್ಘಾಟಿಸಿದರು. ಮುರಳಿಕೃಷ್ಣಪ್ಪ, ಕೆ.ಎಸ್​.ಸಿದ್ದಲಿಂಗಪ್ಪ, ವ.ಚ.ಚನ್ನೇಗೌಡ, ಮಹದೇವಪ್ಪ, ಪ್ರೊ.ಚಂದ್ರಣ್ಣ, ವಿ.ಎಂ.ಪ್ರಸನ್ನಕುಮಾರ್​, .ಡಿ.ಹನುಮಂತರಾಯಪ್ಪ, ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ವಿಕಾಸ ರಂಗ
  • ಶಾಸ್ತ್ರೀಯ ಸಂಗೀತೋತ್ಸವ
  • ಮಕ್ಕಳಿಗೆ ತಾಯಂದಿರ ಮಾರ್ಗದರ್ಶನದ ಅಗತ್ಯ
ತುಮಕೂರು: ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಪರಂಪರೆಯಿಂದ ಭಾರತದ ಯುವಜನರು ದೂರ ಸರಿಯುತ್ತಿದ್ದು, ಯುವ ಮನಸ್ಸುಗಳನ್ನು ಶಾಸ್ತ್ರೀಯ ಸಂಗೀತದತ್ತ ಸೆಳೆಯುವ ನಿಟ್ಟಿನಲ್ಲಿ ತಾಯಂದಿರು ಮಾರ್ಗದರ್ಶನ ಮಾಡುವಂತೆ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ವಿಕಾಸ ರಂಗ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಸಂಗೀತ ಕ್ಷೇತ್ರದ ದಿಗ್ಗಜರಾದ ತ್ಯಾಗರಾಜು, ಮುತ್ತುಸ್ವಾಮಿ ದೀತರು, ಹಾಗೂ ಶ್ಯಾಮಾ ಶಾಸ್ತ್ರಿಗಳ ನೆನಪಿನಲ್ಲಿ ಆಯೋಜಿಸಿದ್ದ "ಶಾಸ್ತ್ರೀಯ ಸಂಗೀತೋತ್ಸವ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಗೀತಕ್ಕೆ ಎಂತಹವರನ್ನು ಸೆಳೆಯುವ ಗುಣವಿದೆ. ಸಭಾಂಗಣದಲ್ಲಿ ಬಹುತೇಕ ಹಿರಿಯರನ್ನೇ ಕಾಣುತ್ತಿದ್ದೇವೆ. ಭವಿಷ್ಯದ ವಾರಸುದಾರರಾಗಿರುವ ಯುವಜನರು ಇಂತಹ ಸಂಗೀತ ಕ್ಷೇತ್ರವನ್ನು ಮುನ್ನೆಡೆಸುವಂತಾಗಬೇಕು. ಹಾಗಾಗಿ ಯುವಜರನ್ನು ಶಾಸ್ತ್ರೀಯ ಸಂಗೀತಕ್ಕೆ ಸೆಳೆಯುವ ಪ್ರಯತ್ನ ನಡೆಯಬೇಕು ಎಂದರು.
ಜ್ಞಾನಬುತ್ತಿ ಸತ್ಸಂಗದ ಅಧ್ಯಕ್ಷ ಮುರುಳಿಕೃಷ್ಣಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಾಸ್ತ್ರೀಯ ಸಂಗೀತದಂತಹ ಕಲೆಯನ್ನು ಆಸ್ವಾದಿಸುವ ಕಲಾ ಪೋಷಕರ ಸಂಖ್ಯೆ ಕಡಿಮೆಯಾಗಿದೆ. ಹಿರಿಯರು ಅದನ್ನು ಒಂದು ತಪ್ಪಸ್ಸಿನ ರೀತಿಯಲ್ಲಿ ಮುನ್ನೆಡಸಿಕೊಂಡು ಹೋದರೆ, ಈಗಿನ ಯುವಕರು ಲುವಾಗಿ ಪರಿಗಣಿಸುತಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ ಕುರು ಪಾಂಡವರ ಸಂಗ್ರಾಮ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಕೆಎಸ್​ಆರ್​ಟಿಸಿ ಕನ್ನಡ ಕ್ರಿಯಾ ಸಮಿತಿ ಗೌರವ ಸಲಹೆಗಾರ ವ.ಚ.ಚನ್ನೇಗೌಡ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಮಹದೇವಪ್ಪ,
ಯೋಗ ಗುರು ಪ್ರೊ.ಚಂದ್ರಣ್ಣ, ನಮೋದಯ ಐಎಎಸ್​ ಅಕಾಡೆಮಿಯ ನಾಗರಾಜ ಯಾದವ್​, ವಿಶ್ವಚೇತನ ಬಳಗದ ವಿ.ಎಂ.ಪ್ರಸನ್ನಕುಮಾರ್​, ಧ್ಯಾನ ಶಿವಬಸಪ್ಪ, ಗೂಳೂರು ಶಿವಕುಮಾರ್​, ವಿಕಾಸ ರಂಗದ ಉಪಾಧ್ಯಕ್ಷ ವಿ.ಡಿ.ಹನುಮಂತರಾಯಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net