ತುಮಕೂರಲ್ಲಿ ಪ್ರತಿಷ್ಠಿತ ಜೂನಿಯರ್​ ಬ್ಯಾಡ್ಮಿಂಟನ್​ ಟೂರ್ನಿ

ಕಿರಿಯರ ಕರ್ನಾಟಕ ರಾಜ್ಯ Ranking​ ಬ್ಯಾಡ್ಮಿಂಟನ್​ ಟೂರ್ನಿ ಆತಿಥ್ಯವಹಿಸುತ್ತಿರುವ ಹಿನ್ನೆಲೆ ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿಗೆ ಕೆಬಿಎ ಅಧ್ಯಕ್ಷ ಕುಮಾರ್​ ಬಂಗಾರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಮುರಳಿ, ಹರೀಶ್​, ಪಿ.ಪ್ರವಿಣ್​, ಎನ್​.ವಿ.ಸ್ವಾಮಿ, ಟಿ.ಆರ್​.ಮನೋಜ್​ ಮತ್ತಿತರರು ಇದ್ದರು.
ಕಿರಿಯರ ಕರ್ನಾಟಕ ರಾಜ್ಯ Ranking​ ಬ್ಯಾಡ್ಮಿಂಟನ್​ ಟೂರ್ನಿ ಆತಿಥ್ಯವಹಿಸುತ್ತಿರುವ ಹಿನ್ನೆಲೆ ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿಗೆ ಕೆಬಿಎ ಅಧ್ಯಕ್ಷ ಕುಮಾರ್​ ಬಂಗಾರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಮುರಳಿ, ಹರೀಶ್​, ಪಿ.ಪ್ರವಿಣ್​, ಎನ್​.ವಿ.ಸ್ವಾಮಿ, ಟಿ.ಆರ್​.ಮನೋಜ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜುಲೈ 27 ರಿಂದ ಆ.1 ರವರೆಗೆ ಪಂದ್ಯಾವಳಿ
  • 13 ಹಾಗೂ 11 ವಯೋಮಾನ ವಿಭಾಗ
  • 600 ಆಟಗಾರರು ಭಾಗಿ
ತುಮಕೂರು: ರಾಜ್ಯಮಟ್ಟದ ಷಟಲ್​ ಬ್ಯಾಡ್ಮಿಂಟನ್​ ಟೂರ್ನಿಗೆ ತುಮಕೂರು ಆತಿಥ್ಯವಹಿಸಲಿದೆ. ಕರ್ನಾಟಕ ರಾಜ್ಯ Ranking​ ಬ್ಯಾಡ್ಮಿಂಟನ್​ (13 ಹಾಗೂ 11 ವಯೋಮಾನ ಒಳಗಿನ) ಟೂರ್ನಿ ಜು. 27 ರಿಂದ ಆಗಸ್ಟ್​ 1 ರವರೆಗೆ ನಡೆಯಲಿದ್ದು ಕಿರಿಯರ ವಿಭಾಗದ ಅತಿದೊಡ್ಡ ಟೂರ್ನಿಯನ್ನು ಮೊಟ್ಟ ಮೊದಲ ಬಾರಿ ತುಮಕೂರಿನಲ್ಲಿ ಆಯೋಜಿಸುತ್ತಿರುವುದು ವಿಶೇಷವೆನಿಸಿದೆ.
ಕಿರಿಯರ ವಿಭಾಗದ 13 ಹಾಗೂ 11 ವಯೋಮಾನದ ಬಾಲಕ, ಬಾಲಕಿಯರ ರಾಜ್ಯ Ranking​ ಟೂರ್ನಿಯಲ್ಲಿ 600ಕ್ಕು ಹೆಚ್ಚು ಆಟಗಾರರು ಭಾಗವಹಿಸಲಿದ್ದು ಚಾಂಪಿಯನ್​ಶಿಪ್​ ಜತೆಗೆ ಶ್ರೇಯಾಂಕ ಪಡೆಯಲು ಸೆಣಸಲಿದ್ದಾರೆ.
ಕುಮಾರ್​ ಬಂಗಾರಪ್ಪ ಭೇಟಿ: ತುಮಕೂರು ಬ್ಯಾಡ್ಮಿಂಟನ್​ ಅಕಾಡೆಮಿ (ಟಿಬಿಎ)ಯಲ್ಲಿ ಪಂದ್ಯಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಡ್ಮಿಂಟನ್​ ಅಸೋಸಿಯೇಷನ್​ (ಕೆಬಿಎ) ಅಧ್ಯಕ್ಷ ಕುಮಾರ್​ ಬಂಗಾರಪ್ಪ, ಕಾರ್ಯದರ್ಶಿ ಮುರಳಿ ಹಾಗೂ ಟೂರ್ನಿ ಸಂಟಕ ಹರೀಶ್​ ಗುರುವಾರ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಟಿಬಿಎ ಮಾಲೀಕ ಪಿ.ಪ್ರವಿಣ್​, ಬ್ಯಾಡ್ಮಿಂಟನ್​ ಕೋಚ್​ಗಳಾದ ಎನ್​.ವಿ.ಸ್ವಾಮಿ, ಟಿ.ಆರ್​.ಮನೋಜ್​ ಮತ್ತಿತರರು ಉಪಸ್ಥಿತರಿದ್ದರು.
2009ರಲ್ಲಿ ಮೊದಲ ಬಾರಿ ತುಮಕೂರಿನಲ್ಲಿ ಹಿರಿಯರ ವಿಭಾಗದ ಕರ್ನಾಟಕ Ranking​ ಟೂರ್ನಿ ನಡೆದಿತ್ತು. ಅದಾದ ಬಳಿಕ ಕಿರಿಯರ ವಿಭಾಗದಲ್ಲಿ ಮೊಟ್ಟಮೊದಲ ಬಾರಿ ಪ್ರತಿಷ್ಠಿತ Ranking​ ಟೂರ್ನಿ ಆಯೋಜಿಸುವ ಅವಕಾಶ ತುಮಕೂರಿಗೆ ಒದಗಿಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net