ಗುತ್ತಿಗೆದಾರರಿಗೆ ಕಳೆದ ಮೂರು ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಿಂದ 8380 ಕೋಟಿ, ನೀರಾವರಿ ಇಲಾಖೆಯಿಂದ 13 ಸಾವಿರ ಕೋಟಿ, ಪಂಚಾಯತ್ ರಾಜ್ಇಲಾಖೆಯಿಂದ 3800 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 3000 ಕೋಟಿ, ವಸತಿ ಇಲಾಖೆಯಿಂದ 2600 ಕೋಟಿ, ನಗರಾಭಿವೃದ್ದಿ ಇಲಾಖೆಯಿಂದ 2000 ಕೋಟಿ, ಕಾರ್ಮಿಕ ಇಲಾಖೆಯಿಂದ 2000 ಕೋಟಿ, ಬಿಬಿಎಂಪಿ (ಗ್ರೆಟರ್ಬೆಂಗಳೂರು)1600 ಕೋಟಿ ರೂ., ಬಾಕಿ ಬರಬೇಕಿದೆ. ನಮ್ಮ ಪರವಾಗಿ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ದ್ವನಿ ಎತ್ತಿದ್ದು ಬಿಟ್ಟರೆ, ಉಳಿದ ಸಚಿವರ್ಯಾ ಸಹ ಮಾತನಾಡುತ್ತಿಲ್ಲ. ಬಿಲ್ ಬಿಡುಗಡೆಗೆ ಸಿನಿಯಾರಿಟಿ ಪರಿಗಣಿಸುತ್ತಿಲ್ಲ. ಅಧಿಕಾರಿಗಳೇ ಕೆಲವರ ಪರ ಲಾಬಿ ಮಾಡಿ, ವಿಶೇಷ ಎನ್ಒಸಿ ನೀಡುತ್ತಿದ್ದಾರೆ. ಇನ್ನೂ ಹಣ ಬಿಡುಗಡೆ ಸಂದರ್ಭದಲ್ಲಿ ಶೇ.80 ರಷ್ಟು ಜ್ಯೇಷ್ಠತೆಗೆ ಆದ್ಯತೆ ನೀಡಬೇಕೆಂಬ ನಿಯಮವಿದ್ದರೂ ಅದನ್ನು ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಮಂಜುನಾಥ್ ಆರೋಪಿಸಿದರು.