ತುಮಕೂರಿನಲ್ಲಿ ಆರಂಭವಾದ ಕರ್ನಾಟಕ ಕ್ರೀಡಾಕೂಟದ ಟೇಕ್ವಾಂಡೊ ಸ್ಪರ್ಧೆಯಲ್ಲಿ ಸ್ಫರ್ಧಿಗಳ ಸೆಣಸಾಟ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರ್ನಾಟಕ ಕ್ರೀಡಾಕೂಟ
ಟೇಕ್ವಾಂಡೊ ಸ್ಪರ್ಧೆ
ನೇಸರ ಗೌಡ, ಸಂಜನಾಗೆ ಸ್ವರ್ಣ
ತುಮಕೂರು: ಕರ್ನಾಟಕ ಕ್ರೀಡಾಕೂಟ 20250&26ಕ್ಕೆ ತುಮಕೂರಿನಲ್ಲಿ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು. ಮೊದಲ ದಿನ ಟೇಕ್ವಾಂಡೊದಲ್ಲಿ ಪದಕಗಳ ಭರ್ಜರಿ ಬೇಟೆ ನಡೆಯಿತು.
ಪುರುಷರ ವಿಭಾಗದ 82 ಕೆಜಿ ವಿಭಾಗದಲ್ಲಿ ನೇಸರ ಡಿ. ಗೌಡ ಟೇಕ್ವಾಂಡೊ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಈ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕ ಗೆದ್ದಕೊಂಡರು.
ಡಾ.ಜಿ.ಪರಮೇಶ್ವರ್ ಒಳಾಂಗಣ ಕ್ರೀಡಾಸಂಕೀರ್ಣದಲ್ಲಿ ನಡೆದ ಸ್ಪರ್ಧೆಯಲ್ಲಿ ನೇಸರ ಚಿನ್ನ ಗೆದ್ದರೆ, ವೈ.ಲಿಖಿತ್ ಬೆಳ್ಳಿ, ಜಿ.ಎಂ.ಸಾಗರ್ ಕಂಚಿನ ಪದಕ ಗೆದ್ದುಕೊಂಡರು.
ಪುರುಷರ 63 ಕೆ.ಜಿ ವಿಭಾಗದಲ್ಲಿ ಎಸ್. ರಾಹುಲ್ ಚಿನ್ನ ಗೆದ್ದರೆ, ಉಮೇಶ್ ಚೌಧರಿ ಬೆಳ್ಳಿಗೆ ತೃಪ್ತಿ ಪಟ್ಟುಕೊಂಡರು. ಮೊಹಮ್ಮದ್ ಜಿ ಹೌಸ್ ಕಂಚಿನ ಪದಕ ಪಡೆದರು.
ಪುರುಷರ 74 ಕೆ.ಜಿ ವಿಭಾಗದಲ್ಲಿ ಪ್ರತ್ಯುಶ್ ಮಾಣಿ ಸ್ವರ್ಣ ಗೆದ್ದುಕೊಂಡರೆ, ಎಚ್.ಅಬುಬಕ್ಕರ್ ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿ ಗೆದ್ದರು. ಎಂ.ಆರ್.ಮನೋಜ್ ನಾಯಕ್ ಕಂಚಿಗೆ ತೃಪ್ತಿ ಪಟ್ಟುಕೊಂಡರು.
54 ಕೆಜಿ ವಿಭಾಗ: ಜಿ.ಅಕ್ಷಯ್ ಕುಮಾರ್ ಪುರುಷರ 54 ಕೆ.ಜಿ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಎಸ್.ಸೂರ್ಯ ಬೆಳ್ಳಿ ಹಾಗೂ ವಿಜಯ್ ಧಾಮಿ ಕಂಚಿನ ಪದಕ ಗೆದ್ದುಕೊಂಡರು.
ಸಂಜನಾಗೆ ಸ್ವರ್ಣ: ಮಹಿಳೆಯರ ವಿಭಾಗದ 43 ಕೆಜಿ ವಿಭಾಗದಲ್ಲಿ ಸಂಜನಾಶರ್ಮ ಮೊದಲ ಸ್ಥಾನ ಗಳಿಸಿ ಬಂಗಾರ ಗೆದ್ದುಕೊಂಡರು. ವಿಹಾರಿಕಾ ನಯನಾ ವಿಷ್ಣು ಬೆಳ್ಳಿ ಹಾಗೂ ಅಭಿನಯ ಕಂಚಿನ ಪದಕ ಪಡೆದರು.
53 ಕೆಜಿ ವಿಭಾಗದಲ್ಲಿ ಎಂ.ಪೂರ್ವಿಕ ಚಿನ್ನ ಮುಡಿಗೇರಿಸಿಕೊಂಡರೆ, ಸಾನ್ವಿ ಶ್ರೀ, ಅಂಕಿತಾ ನವ್ಯ ಕಾಂತ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಗೆದ್ದರು.
62 ಕೆಜಿ ವಿಭಾಗದಲ್ಲಿ ವಿ.ಹ್ಯಾಪಿ ಪ್ರಥಮ ಸ್ಥಾನದೊಂದಿಗೆ ಸ್ವರ್ಣ ಗೆದ್ದರೆ, ಎಸ್.ಅನುಶಾವಾಣಿ ಬೆಳ್ಳಿ ಹಾಗೂ ಪ್ರಿಯಾಂಕ ಕಂಚಿನ ಪದಕ ಪಡೆದರು.