ಒಕ್ಕಲಿಗರ ಸಂಘದ ಬೆಳವಣಿಗೆಗೆ ಕೈಜೋಡಿಸಿ

ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆಯ ಬಾಬು ಜಗಜೀವನರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಒಕ್ಕಲಿಗರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞ ಪರಮೇಶ್ವರಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್​ ನಿರ್ದೇಶಕ ಸಿಂಗದಹಳ್ಳಿ ರಾಜ್​ ಕುಮಾರ್​, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್​ ಇದ್ದರು.
ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆಯ ಬಾಬು ಜಗಜೀವನರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಒಕ್ಕಲಿಗರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೃದಯ ರೋಗ ತಜ್ಞ ಪರಮೇಶ್ವರಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕ್​ ನಿರ್ದೇಶಕ ಸಿಂಗದಹಳ್ಳಿ ರಾಜ್​ ಕುಮಾರ್​, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಒಕ್ಕಲಿಗರ ಸಂಘದ ಬೆಳವಣಿಗೆಗೆ ಕೈಜೋಡಿಸಿ
ಚಿಕ್ಕನಾಯಕನಹಳ್ಳಿ:

ಒಕ್ಕಲಿಗರ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಸಂಘದಿಂದ ನಮಗೇನು ಲಾಭ ಎನ್ನುವುದನ್ನು ಬಿಟ್ಟು ಸಮಾಜಕ್ಕೆ ನನ್ನ ಕೊಡುಗೆ ಏನು ಎಂದು ಅರಿಯಬೇಕು ಎಂದು ಶಾಸಕ ಸಿ.ಬಿ ಸುರೇಶ್​ ಬಾಬು ತಿಳಿಸಿದರು.

ತಾಲೂಕಿನ ಕಂದಿಕೆರೆಯ ಬಾಬು ಜಗಜೀವನರಾಮ್​ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಹಾಗೂ ಒಕ್ಕಲಿಗರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವಲ್ಲಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣದ ಮೂಲಕ ಮಕ್ಕಳಿಗೆ ಭವಿಷ್ಯ ರೂಪಿಸುವ ಕೆಲಸ ಸಂಘಗಳು ಮಾಡುತ್ತಿವೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಮಾತನಾಡಿ, ಸಂಘ ಕಟ್ಟುವ ಮೂಲಕ ಸಮಾಜ ಕಟ್ಟಬೇಕು. ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ, ಜ್ಞಾನವಂತರನ್ನಾಗಿ ಮಾಡಿ, ಸದಾ ಒಳ್ಳೆಯ ಕೆಲಸ ಮಾಡುವ ಚಿಂತನೆ ಮಾಡುವ ಮನಸ್ಸು ನಿಮ್ಮದಾಗಲಿ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹರ್ಷ ತಿಮ್ಮನಹಳ್ಳಿ ಮಾತನಾಡಿ, ಸಂಘಗಳು ಸಂಬಂಧಿಕರ ಅಣ್ಣ ತಮ್ಮಂದಿರ ಸಂಘಗಳಾಗದೆ ಸಮಾಜದ ಎಲ್ಲರೂ ಒಗ್ಗೂಡುವಂತಹ ಸಂಘಗಳಗಬೇಕು ಎಂಬ ಉದ್ದೇಶದಿಂದಲೇ ರಾಜ್ಯ ಒಕ್ಕಲಿಗರ ಸಂಘ ಜಿಲ್ಲೆಗೊಬ್ಬರಂತೆ ನಿರ್ದೇಶಕರನ್ನು ಮಾಡಿದೆ. ಅದೇ ರೀತಿ ನಮ್ಮ ತಾಲೂಕಿನಲ್ಲೂ ಪ್ರತಿ ಗ್ರಾಪಂ ಒಬ್ಬರಂತೆ ನಿರ್ದೇಶಕರನ್ನು ಮಾಡಲಾಗಿದೆ. ಸಂಘ ಏಕವ್ಯಕ್ತಿಯ ಕೈಯಲ್ಲಿರದೆ ಎಲ್ಲರೂ ಸಂಘದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉದ್ದೇಶವೇ ಇದಕ್ಕೆ ಕಾರಣವಾಗಿದೆ ಎಂದರು.
ತಿಪಟೂರು ಜೆಡಿಎಸ್​ ಮುಖಂಡ ಕೆ.ಟಿ.ಶಾಂತಕುಮಾರ್​, ರಾಜ್ಯ ಒಕ್ಕಲಿಗರ ಸಂಘದ ಹನುಮಂತರಾಯಪ್ಪ, ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ಜಿ.ಕೃಷ್ಣಗೌಡ, ಪ್ರಧಾನ ಕಾರ್ಯದರ್ಶಿ ಹರೀಶ್​, ನೂತನವಾಗಿ ಆರಂಭವಾದ ಕಂದಿಕೆರೆ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಮುನಿಯಪ್ಪ, ಅಧ್ಯಕ್ಷ ಉದಯ್​ ಕುಮಾರ್​, ಉಪಾಧ್ಯಕ್ಷ ವಸಂತ್​ ಕುಮಾರ್​, ಪ್ರಧಾನ ಕಾರ್ಯದರ್ಶಿ ಯಶವಂತ್​ ಕುಮಾರ್​, ಸಂಘಟನಾ ಕಾರ್ಯದರ್ಶಿ ದಿನೇಶ್​ ಕುಮಾರ್​, ಸಂಘಟನಾ ಕಾರ್ಯದರ್ಶಿ ಕೋದಂಡರಾಮು, ನಿರ್ದೇಶಕರಾದ ಶಾಂತಕುಮಾರ್​, ರಂಗಸ್ವಾಮಿ, ಪುಟ್ಟರಂಗಪ್ಪ ಇದ್ದರು.
ಸಮಾಜದಲ್ಲಿನ ಎಲ್ಲ ಸಣ್ಣಪುಟ್ಟ ಜನಾಂಗಗಳು ಒಗ್ಗಟ್ಟಾಗಿವೆ. ಅದೇ ರೀತಿ ನಮ್ಮ ಒಕ್ಕಲಿಗರು ತಮ್ಮ ಒಳ ಪಂಗಡಗಳನ್ನು ನಮ್ಮ ಆಚರಣೆಗೆ ಬಳಸಿಕೊಂಡು ಒಕ್ಕಲಿಗರ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡುವಂತಹ ಅವಕಾಶಗಳನ್ನು ನಾವು ಕಲ್ಪಿಸಿ ಕೊಡಬೇಕಾಗಿರೋದು ನಮ್ಮ ಜವಾಬ್ದಾರಿ. ತಾಲೂಕು ಒಕ್ಕಲಿಗರ ಸಂಘಕ್ಕೆ 2 ಎಕರೆ ಜಾಗ ನೀಡಲಾಗುವುದು.
-ಎಸ್​.ಆರ್​.ಶ್ರೀನಿವಾಸ್​, ಗುಬ್ಬಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net