ಸಿನಿಮೀಯ ಶೈಲಿಯಲ್ಲಿ ಪೊಲೀಸ್​ ಚೇಸಿಂಗ್​ !!

ಶಿರಾ ತಾಲೂಕು ಜ್ಯುಯೆಲರಿ ಶಾಪ್​ ದರೋಡೆ ಪ್ರಕರಣ ಭೇಧಿಸಿದ ಪೊಲೀಸರು ವಶಪಡಿಸಿಕೊಂಡ ಚಿನ್ನ, ಬೆಳ್ಳಿ ಆಭರಣ ವೀಸಿದ ಎಸ್ಪಿ ಕೆ.ವಿ.ಅಶೋಕ್​.
ಶಿರಾ ತಾಲೂಕು ಜ್ಯುಯೆಲರಿ ಶಾಪ್​ ದರೋಡೆ ಪ್ರಕರಣ ಭೇಧಿಸಿದ ಪೊಲೀಸರು ವಶಪಡಿಸಿಕೊಂಡ ಚಿನ್ನ, ಬೆಳ್ಳಿ ಆಭರಣ ವೀಸಿದ ಎಸ್ಪಿ ಕೆ.ವಿ.ಅಶೋಕ್​.
Published on

ಪ್ರಮುಖ ಮುಖ್ಯಾಂಶಗಳು

  • ಹಾಡುಹಗಲೇ ಜ್ಯುಯೆಲರ್ಸ್​ ಶಾಪ್​ ದರೋಡೆ
  • 12 ಗಂಟೆಯೊಳಗೆ ದರೋಡೆಕೋರರ ಬಂಧನ
  • ಸಮಯಪ್ರಜ್ಞೆ, ವೃತ್ತಿಪರತೆ ಮೆರೆದ ಪೊಲೀಸರು
ತುಮಕೂರು: ಜ್ಯುಯೆಲರ್ಸ್​ ಶಾಪ್​ ದರೋಡೆಕೋರರನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ ಜಿಲ್ಲೆಯ ಪೊಲೀಸರು 12 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಪೊಲೀಸರ ಸಮಯಪ್ರಜ್ಞೆ, ವೃತ್ತಿಪರತೆ ಹಿಡಿದ ಕೈಗನ್ನಡಿ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್​ ತಂಡವನ್ನು ಬೆನ್ನುತಟ್ಟಿದರು.
ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್​ ಠಾಣೆ ವ್ಯಾಪ್ತಿಯ ಬೆಂಚೆ ಗೇಟ್​ನಲ್ಲಿರುವ ಶ್ರೀ ಜಗತಾಂಬ ಜ್ಯೂಯಲರ್ಸ್​ ಶಾಪ್​ಗೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ನುಗ್ಗಿದ ನಾಲ್ವರು ದರೋಡೆಕೋರರು ಅಂಗಡಿಯಲ್ಲಿದ್ದ ದಿನೇಶ್​ ಹಾಗೂ ಅವರ ಅಜ್ಜಿ ನಾತಿದೇವಿ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಬುಲೇರೊ ವಾಹನದಲ್ಲಿ ಪರಾರಿಯಾಗಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಹೆದ್ದಾರಿಗಳಲ್ಲಿ ನಾಕಾಬಂದಿ ನಿರ್ಮಿಸಲು ಸಂದೇಶ ನೀಡುತ್ತಿದ್ದಂತೆ ದರೋಡೆಕೋರರ ಯುರ್ಟನ್​ ಹೊಡೆದು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಟನೆ ನಡೆದ ಕ್ಷಣದಿಂದ ಕಾರ್ಯಾಚರಣೆಗೆ ಇಳಿದ ಪೊಲೀಸರು 12 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜಸ್ತಾನ ಮೂಲದ ಅರವಿಂದ್​ ಕುಮಾರ್​ (28), ಡುಂಗರ್​ ಸಿಂಗ್​ (24). ಮಹೇಂದರ್​ ಸಿಂಗ್​ (32) ಹಾಗೂ ಮೂಲತ ರಾಜಸ್ತಾನ ಸದ್ಯ ಕೋಲಾರ ಜಿಲ್ಲೆಯ ಮಾಲೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಧುಸಿಂಗ್​ (28) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬುಲೆರೋ ವಾಹನ, ಸುಲಿಗೆ ಮಾಡಿದ್ದ ಚಿನ್ನ ಬೆಳ್ಳಿ ಆಭರಣಗಳು ಹಾಗೂ ಚಿನ್ನ ಲೇಪಿತ ಆಭರಣಗಳನ್ನು (ರೋಲ್ಡ್​ ಗೋಲ್ಡ್​ ) ವಶಪಡಿಸಿಕೊಂಡಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಬಿಎನ್​ಎಸ್​ ರೀತ್ಯಾ ಕಲಂ 309 (6) ಪ್ರಕರಣ ದಾಖಲಾಗಿದೆ.
ಸಿನಿಮೀಯ ಶೈಲಿ ಚೇಸಿಂಗ್​ !
ಟನೆ ನಡೆದ ಸುದ್ದಿತಿಳಿದ ಕ್ಷಣಾರ್ಧದಲ್ಲಿ ಅರ್ಲಟ್​ ಆದ ಶಿರಾ ಉಪವಿಭಾಗ ಪೊಲೀಸರು, ಬುಲೆರೋ ವಾಹನದ ಚಲನವಲದ ಮೇಲೆ ನಿಗಾ ಇಟ್ಟರು. ಹೆದ್ದಾರಿಗಳಲ್ಲಿ ಸಂದೇಶ ನೀಡಿ ನಾಕಾಬಂಧಿ ನಿರ್ಮಾಣಕ್ಕೆ ಮುಂದಾದರು. ಬೆಂಚ್​ಗೇಟ್​ನಲ್ಲಿ ಡಕಾಯಿತಿ ಮಾಡಿ ಬುಲೆರೋ ವಾಹನ ಹತ್ತಿದ ದರೋಡೆಕೋರರು ಇನ್ನೂ ತಾವರೆಕೆರೆ ತಲುಪಿರಲಿಲ್ಲ. ರಸ್ತೆಯಲ್ಲಿ ನಾಕಾಬಂಧಿ ಹಾಕಿದ್ದ ಪೊಲೀಸರನ್ನು ಕಂಡೊಂಡನೆ ಯುರ್ಟನ್​ ಹೊಡೆದರು. ಬುಲೆರೋ ಬೆನ್ನಟ್ಟಿದ್ದ ಎಎಸ್ಪಿ ಸಿ.ಗೋಪಾಲ್​, ಶಿರಾ ಡಿವೈಎಸ್ಪಿ ಬಿ.ಕೆ.ಶೇಖರ್​, ಪೊಲೀಸ್​ ಇನ್ಸೆಪೆಕ್ಟರ್​ ಪ್ರವಿಣ್​ ಕುಮಾರ್​ ವಾಹನಗಳನ್ನು ಕಂಡೊಂಡನೆ ದರೋಡೆಕೋರರು ಮತ್ತಷ್ಟು ಗಲಿಬಿಲಿಗೊಂಡಿದ್ದಾರೆ. ಈ ವೇಳೆ ಪೊಲೀಸರಿಗೆ ವಾಹನಕ್ಕೆ ಗುದ್ದೇ ಬಿಟ್ಟಿದ್ದರು.
ಡ್ರೋಣ್​, ಕೂಂಬಿಂಗ್​
ದರೋಡೆಕೋರರ ಹಿಡಿಯಲು ಗ್ರಾಮಸ್ಥರು ಪೊಲೀಸರ ನೆರವಿಗೆ ನಿಂತರು. ಭುವನಹಳ್ಳಿ, ಸೋರೆಕುಂಟೆ, ಮೇಕೆರಹಳ್ಳಿ, ಕೆಂಚಪ್ಪನಹಳ್ಳಿ, ತಿತ್ತಾಗಾನಹಳ್ಳಿ, ನಿಂಬೆಮರದಹಳ್ಳಿ ಗ್ರಾಮಸ್ಥರ ನೆರವಿನಿಂದ ರಸ್ತೆಗಳನ್ನು ಬ್ಲಾಕ್​ ಮಾಡಿದ್ದರಿಂದ ಹಳ್ಳಿ ರಸ್ತೆ ಕಡೆಗೆ ದರೋಡೆಕೋರರು ಬುಲೆರೋ ವಾಹನ ತಿರುಗಿಸಿದರು. ಮುದಿಗೆರೆ ಕಾವಲ್​, ಮೇಕೆರಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಪತ್ತೆತಂಡದಲ್ಲಿದ್ದ ಪೊಲೀಸರು ಇಡೀ ರಾತ್ರಿ ಕೂಂಬಿಂಗ್​ ಕೈಗೊಂಡರು. ಕಾಡಿನಲ್ಲಿ ಮರೆಯಾಗಲು ಯತ್ನಿಸಿದ ಆರೋಪಿಗಳು ಒಬ್ಬೊಬ್ಬರೆ ಪೊಲೀಸರ ಬಲೆಗೆ ಬಿದ್ದರು. ಬೆಳಗಾಗುವ ಹೊತ್ತಿಗೆ ನಾಲ್ವರು ಪೊಲೀಸರ ವಶದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net