ಈಗಿನ ರಾಜಕೀಯ ಪಕ್ಷಗಳಲ್ಲಿ, ಸರ್ಕಾರಗಳಲ್ಲಿ ಮೌಲ್ಯಾಧಾರಿತ ರಾಜಕಾರಣ ಕಾಣುತ್ತಿಲ್ಲ. ಜನರ ಸಮಸ್ಯೆ ಕೇಳುವ ಸೌಜನ್ಯವಿಲ್ಲ, ಜನರ ಅಭಿಪ್ರಾಯಕ್ಕೆ ಮನ್ನಣೆ ಇಲ್ಲ. ಬಿಡದಿ ಬಳಿಯ ರೈತರು ತಮ್ಮ ಜಮೀನು ನೀಡುವುದಿಲ್ಲ ಎಂದು ಹೋರಾಟ ಮಾಡುತ್ತಿದ್ದರೂ ಸರ್ಕಾರ ಬಲವಂತವಾಗಿ ಜಮೀನು ಪಡೆಯಲು ಹೊರಟಿದೆ. ರೈತರನ್ನು ಅಲ್ಲಿಂದ ಗುಳೆ ಎಬ್ಬಿಸುವ ಹುನ್ನಾರ ನಡೆದಿದೆ. ಇದಕ್ಕೆ ಅವಕಾಶ ಮಾಡಬಾರದು, ರಾಜ್ಯಪಾಲರು ಮಧ್ಯಪ್ರವೇಶಿಸಿ ರೈತವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕಾರ್ಯದರ್ಶಿ ಎಚ್.ಸಿ. ಸುರೇಶ್ ಒತ್ತಾಯಿಸಿದರು.