ತುಮಕೂರು: ಅಗ್ರಶ್ರೇಯಾಂಕಿತೆ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೈಟ್ ಹಾಗೂ ಮೂರನೇ ಶ್ರೇಯಾಂಕಿತೆ ಭಾರತದ ವೈದೇಹಿ ಚೌಧರಿ ಐಟಿಎಫ್ ವಿಶ್ವ ಮಹಿಳಾ ಟೆನಿಸ್ ಚಾಂಪಿಯನ್ಶಿಪ್ (ಡಬ್ಲೂ35 ಟೂರ್ನಿ) ಸಿಂಗಲ್ಸ್ನಲ್ಲಿ ಉತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪ್ರಧಾನಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಜಸ್ಟಿನಾ 6-1, 6-1 ನೇರ ಸೆಟ್ಗಳಿಂದ ಭಾರತದ ಸೌಮ್ಯ ವಿಜ್ ವಿರುದ್ಧ ಭರ್ಜರಿ ಜಯಗಳಿಸಿದರು. ಎರಡನೇ ಶ್ರೇಯಾಂಕಿತೆ ಪೋಲೆಂಡ್ನ ಜುಝನ್ನಾ ಪಾವ್ಲಿಕೊವಾಸ್ಕೊ 6-0,6-1 ಸೆಟ್ಗಳಿಂದ ಭಾರತದ ಶ್ರೀಮಾನ್ಯ ರೆಡ್ಡಿ ಅನುಗೊಂಡ ವಿರುದ್ಧ ನಿರಾಯಾಸ ಜಯಗಳಿಸಿದರು.
ಮೂರನೇ ಶ್ರೇಯಾಂಕಿತ ಭಾರತದ ವೈದೇಹಿ ಚೌಧರಿ 6-3, 6-4 ಸೆಟ್ಗಳಿಂದ ಸ್ಥಳಿಯ ತಾರೆ ಸೋಹಾ ಸಾದಿಕ್ ಮಣಿಸಿದರು. ಸೋಹಾ ಉತ್ತಮ ಹೋರಾಟ ನೀಡಿದರಾದರು ವೈದೇಹಿ ಮಿಂಚಿನ ಆಟದ ಎದುರು ಶರಣಾದರು. ಇನ್ನೂ ನಾಲ್ಕನೇ ಶ್ರೇಯಾಂಕಿತೆ ಭಾರತದ ಝೀಲ್ ದೇಸಾಯಿ 6-0, 6-0 ನೇರ ಸೆಟ್ಗಳಿಂದ ಜೀತೇಶ್ ಕುಮಾರಿಯನ್ನು ಸದೆಬಡಿದರು.
ಆರನೇ ಶ್ರೇಯಾಂಕಿತ ರಷ್ಯಾದ ಎಕಟೆರಿನಾ ಯಾಶಿನಾ 6-2, 6-2 ಸೆಟ್ಗಳಿಂದ ಭಾರತದ ಬೇಲಾ ತಮ್ಹಾಂಕರ್ರನ್ನು ಸೋಲಿಸಿದರೆ, ಪೋಲೆಂಡ್ ನ ಜುಝಾನ್ನಾ ಕೊಲೊನಸ 6-2, 6-0 ಸೆಟ್ಗಳಿಂದ ಭಾರತದ ಐಶ್ವರ್ಯ ಜಾಧವ್ ವಿರುದ್ಧ ಅರ್ಹ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಪ್ರವೇಶಿಸಿದರು.
ಆಕಾಂಕ್ಷಾಗೆ ಆಘಾತ: ಟೂರ್ನಿಯ ಎಂಟನೇ ಶ್ರೇಯಾಂಕಿತೆ ಭಾರತದ ಆಕಾಂಕ್ಷಾ ದಿಲೀಪ ನಿಟ್ಟೂರೆ 6-&1, 6&-1 ಸೆಟ್ಗಳಿಂದ ರಷ್ಯಾದ ಅರಿನಾ ಅರಿಫುಲ್ಲಿನಾ ವಿರುದ್ಧ ಸೋಲನುಭವಿಸಿದರು. ಸಾಕಷ್ಟು ಭರವಸೆಹುಟ್ಟಿಸಿದ್ದ ಆಕಾಂಕ್ಷಾ ಟೂರ್ನಿಯಿಂದಲೇ ನಿರ್ಗಮಿಸಿದ್ದು ಈ ದಿನದ ಆಘಾತಕಾರಿ ಫಲಿತಾಂಶಗಳಲ್ಲೊಂದಾಗಿತ್ತು.
ಭಾರತದ ಲಕ್ಷ್ಮೀಸಿರಿ ದಂಡು 1-6, 7-5, 6-3 ಸೆಟ್ಗಳಿಂದ ಪ್ರತ್ಯುಷ ರಾಚಪುಡಿ ವಿರುದ್ಧ ಗೆಲುವು ಸಾಧಿಸಿದರು. ಆರಂಭಿಕ ಸೆಟ್ ಹಿನ್ನೆಡೆ ಬಳಿಕ ಪುಟಿದೆದ್ದ ಲಕ್ಷ್ಮೀಸಿರಿ ಎರಡನೇ ಸೆಟ್ನಲ್ಲಿ ತೀವ್ರ ಪೈಪೋಟಿ ನಡೆಸಿ 7-5 ರಿಂದ ಸೆಟ್ ಗೆದ್ದು ಪಂದ್ಯವನ್ನು ಜೀವಂತವಾಗಿರಿಸಿದರು. 3ನೇ ಸೆಟ್ನಲ್ಲಿ ಲಯ ಮುಂದುವರೆಸಿದ ಲಕ್ಷಿ$್ಮಸಿರಿ 6-3 ರಿಂದ ಗೆದ್ದುಬಿಗಿದರು.
ಭಾರತದ ಜೆನ್ನಿಫರ್ ಲುಯಿಖಾಮ್ 6-3, 4-6, 6-3 ಸೆಟ್ಗಳಿಂದ ಚೆವಿಕಾ ರೆಡ್ಡಿ ಸಮಾ ವಿರುದ್ಧ ಸಮಬಲ ಹೋರಾಟದಲ್ಲಿ ಜಯಗಳಿಸಿದರು. ಎರಡನೇ ಸೆಟ್ನಲ್ಲಿ ಹಿನ್ನೆಡೆ ಮೆಟ್ಟಿದ ಜೆನ್ನಿಫರ್ 3ನೇ ಸೆಟ್ನಲ್ಲಿ ಉತ್ತಮ ನಿರ್ವಹಣೆ ತೋರಿ ಗೆಲುವು ಸಾಧಿಸಿದರು.
ಡಬಲ್ಸ್ನಲ್ಲಿ ಸೋಹಾ,ಮಧುರಿಮಾಗೆ ಜಯ: ಮಹಿಳೆಯರ ಡಬಲ್ಸ್ನಲ್ಲಿ ಭಾರತದ ಸೋಹಾ ಸಾದಿಕ ಮತ್ತು ಮಧುರಿಮಾ ಸಾವಂತ್ ಜೋಡಿ 6-&3, 6-&2 ನೇರ ಸೆಟ್ಗಳಿಂದ ಭಾರತದ ಜೋಡಿ ಪೂಜಾ ಇಂಗಳೆ ಮತ್ತು ಪ್ರತ್ಯುಷಾ ರಾಚಪುಡಿ ವಿರುದ್ಧ ಜಯಸಾಧಿಸಿದರು.
ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಶ್ರೀಮಾನ್ಯ ರೆಡ್ಡಿ ಅನುಗೊಂಡ ಮತ್ತು ಸಾಹಿರಾ ಸಿಂಗ್ 3&-6, 6&-3, 10&-6 ಸೆಟ್ಗಳಿಂದ ಲಕ್ಷ್ಮೀಸಿರಿ ದಂಡು ಮತ್ತು ಚೆವಿಕಾ ರೆಡ್ಡಿ ಸಮಾ ವಿರುದ್ಧ ಗೆಲುವು ಸಾಧಿಸಿದರು.
ಸಿಂಗಲ್ಸ್ನಲ್ಲಿ ಸೋಲಿನ ಆಘಾತ ಅನುಭವಿಸಿದ್ದ ಮೂರನೇ ಶ್ರೇಯಾಂಕದ ಆಕಾಂಕ್ಷಾ ದಿಲೀಪ್ ನಿಟ್ಟೂರೆ ಮತ್ತು ಜಪಾನ್ನ ಮಿಚಿಕಾ ಒಜೆಕಿ ಜತೆಗೂಡಿ 6-3, 4-6, 10-6 ಸೆಟ್ಗಳಿಂದ ಕಶಿಶ ಭಾಟಿಯಾ ಮತ್ತು ಸೋನಾಲ ಪಾಟೀಲ್ರನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದರು.