ತಂದೆ ತಾಯಿಯ ಆರೈಕೆ ಮಕ್ಕಳ ಕರ್ತವ್ಯ

It is the duty of children to take care of their parents.
It is the duty of children to take care of their parents.
Published on
ಐ.ಡಿ.ಹಳ್ಳಿ: ಇತ್ತೀಚಿನ ದಿನಗಳಲ್ಲಿ ತಂದೆ&ತಾಯಿ ಆಸ್ತಿ ತಮ್ಮ ಹೆಸರಿಗೆ ಬಂದ ನಂತರ ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಪ ವಿಭಾಗಾಧಿಕಾರಿಗಳಿಗೆ ತಿಳಿಸಿ ಆ ಅಸ್ತಿಯನ್ನು ಹಿರಿಯನಾಗರಿಕ ರಕ್ಷಣೆ ಕಾಯ್ದೆಯಡಿ ಹಿಂಪಡೆಯಲು ಕ್ರಮ ಜರುಗಿಸಲಾಗುವುದು ಎಂದು ಮಧುಗಿರಿಯ ವೃತ್ತ ನಿರೀಕ್ಷಕ ಹನುಮಂತರಾಯಪ್ಪ ತಿಳಿಸಿದರು.
ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿಯಲ್ಲಿ ಅಯೋಜಿಸಿದ್ದ ಪೊಲೀಸ್​ ಇಲಾಖೆಯ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಹಿರಿಯ ನಾಗರಿಕರ ಹಕ್ಕನ್ನು ಕಸಿದ್ದುಕೊಳ್ಳಬೇಡಿ. ಹಿರಿಯರನ್ನು ಗೌರವದಿಂದ ಕಾಣಬೇಕು. ತಂದೆ&ತಾಯಿಯ ಅರೈಕೆ ಮಕ್ಕಳ ಆದ್ಯ ಕರ್ತವ್ಯ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಯುವಕರು ಜಾಗೃತರಾಗಬೇಕು. ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲು ಸಾರ್ವಜನಿಕರ ಸಹಕಾರ ಮುಖ್ಯ. ಗ್ರಾಮೀಣ ಭಾಗದಲ್ಲಿ ಮದ್ಯ ಅಕ್ರಮ ಮಾರಾಟದ ಬಗ್ಗೆ ನಮ್ಮ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚಲಾಗುತ್ತಿದ್ದು, ಸಾರ್ವಜನಿಕರ ಸಹಕಾರ ನೀಡಿ ನಶೆಮುಕ್ತ ಜಿಲ್ಲೆ ಮಾಡಲು ಸಹಕರಿಸಬೇಕು ಎಂದರು.
ಗ್ರಾಪಂ ಸದಸ್ಯ ಜಿಲಾನ್​, ಪೊಲೀಸ್​ ಪೇದೆ ನಟರಾಜ್​, ರಾಜ್​ಕುಮಾರ್​, ಮುಖಂಡರಾದ ಎ.ನಾಗೇಶ್​, ಲಿಂಗಪ್ಪ, ಡಾ.ಮಲ್ಲೇಶ್​, ಶಂಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net