ಭವಿಷ್ಯದಲ್ಲಿ ಜನವರಿ 16ಕ್ಕೆ ಬರಲಿದೆ ಸಂಕ್ರಾಂತಿ!

ಸಂಕ್ರಾಂತಿ ಸಿದ್ಧತೆಯಲ್ಲಿರುವ ಜನರು
ಸಂಕ್ರಾಂತಿ ಸಿದ್ಧತೆಯಲ್ಲಿರುವ ಜನರು
Published on

ಪ್ರಮುಖ ಮುಖ್ಯಾಂಶಗಳು

  • ಜನವರಿಗೆ 14ರಿಂದ 15ಕ್ಕೆ ಶಿಫ್ಟ್​
  • ಭವಿಷ್ಯದಲ್ಲಿ ಒಂದು ದಿನ ಮುಂದಕ್ಕೆ
  • ಸಂಕ್ರಾಂತಿ ದಿನಾಂಕ ಕುತೂಹಲ
ತುಮಕೂರು: ಹಿಂದಿನ ವರ್ಷಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ಜನವರಿ 14 ರಂದು ಬರುತ್ತಿತ್ತು. ಈಗಿನ ವರ್ಷಗಳಲ್ಲಿ ಜನವರಿ 15 ರಂದು ಬರುತ್ತಿದೆ. ಕಾರಣವೇನು ಎಂಬ ಕುತೂಹಲಕ್ಕೆ ತುಮಕೂರಿನ ಕ್ಯಾಲೆಂಡರ್​ ಶಿವಕುಮಾರ್​ ಉತ್ತರಿಸಿದ್ದಾರೆ.
ಮಕರ ಸಂಕ್ರಾಂತಿ 1862 ರಿಂದ 1934ರ ವರೆಗೆ ಜನವರಿ 13, 1935 ರಿಂದ 2007ರ ವರೆಗೆ ಜ.14, 2008 ರಿಂದ 2080ರ ವರೆಗೆ ಜ.15 ಹಾಗೂ 2081 ರಿಂದ 2153ರ ವರೆಗೆ ಜ.16ರಂದು ಬರಲಿದೆ.
ಇಂಗ್ಲೀಷ್​ ಕ್ಯಾಲೆಂಡರ್​ ಪ್ರಕಾರ ಸೂರ್ಯ ಪ್ರತಿವರ್ಷ ಧನುರ್​ ರಾಶಿಯಿಂದ ಮಕರ ರಾಶಿಗೆ 20 ನಿಮಿಷಗಳು ತಡವಾಗಿ ಪ್ರವೇಶಿಸುತ್ತಾನೆ ಹಾಗಾಗಿ, ಸೂರ್ಯ 3 ವರ್ಷಗಳಿಗೊಮ್ಮೆ 1 ಗಂಟೆ ತಡವಾಗಿ ಪ್ರವೇಶಿಸುತ್ತಾನೆ. ಅಂದರೆ 72 ವರ್ಷಗಳಿಗೊಮ್ಮೆ ಸೂರ್ಯ ಮಕರ ರಾಶಿ ಪ್ರವೇಶಿಸಲು ಒಂದು ದಿನ ತಡವಾಗಲಿದೆ. ಇದರಿಂದಾಗಿ ಪ್ರತಿ 72 ವರ್ಷಗಳಿಗೊಮ್ಮೆ ಮಕರ ಸಂಕ್ರಾಂತಿ ಹಬ್ಬ ಒಂದು ದಿನ ಮುಂದೆ ಹೋಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net