ಜಿಲ್ಲೆಯ ಶಾಸಕರಾದ ರಮೇಶ್ಬಾಬು, ಚಿದಾನಂದ ಎಂ.ಗೌಡ ಹಾಗೂ ಇತರರು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ವಿವಿಧ ಸಭೆ, ಸಮಾರಂಭಗಳಿಗೆ ಅಲ್ಲಿನ ಸ್ಥಳಿಯ ವಿಧಾನ ಪರಿಷತ್ ಶಾಸಕರುಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯವರು ಹೊರಡಿಸಿರುವ ಶಿಫಿ್ಟಾಚಾರ ನಿಯಮಗಳನ್ವಯ ಆಹ್ವಾನಿಸುತ್ತಿಲ್ಲ, ಈ ಬಗ್ಗೆ ದೂರು ನೀಡಿದರೂ ಸೂಕ್ತವಾಗಿ ಸ್ಪಂದಿಸುವುದಿಲ್ಲ ಎಂದು ಅನೇಕ ಹಕ್ಕುಚ್ಯುತಿ ಪ್ರಕರಣಗಳನ್ನು ದಾಖಲಿಸಿದ್ದರು.