ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗಗಳ ಸಹಯೋಗದಲ್ಲಿ ಯೋಜಿಸಿದ್ದ "ಭಾರತದಲ್ಲಿ ಪರಂಪರೆ ಅರ್ಥವ್ಯವಸ್ಥೆ' ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಪ್ರೊ. ಯು. ಎಸ್. ಮೂರ್ತಿ ಉದ್ಘಾಟಿಸಿದರು. ಪ್ರೊ. ಎಸ್. ಪುಟ್ಟಸ್ವಾಮಯ್ಯ, ಡಾ. ರವೀಂದ್ರ ಕುಮಾರ್, ಡಾ. ಎಲ್. ಪಿ. ರಾಜು, ಡಾ. ಎನ್.ಟಿ.ನೀಲಕಂಠ, ಡಾ. ಪ್ರಿಯಾ ಠಾಕೂರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತದಲ್ಲಿ ಪರಂಪರೆ ಅರ್ಥವ್ಯವಸ್ಥೆ ಕಾರ್ಯಾಗಾರ
ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ
ನಿವೃತ್ತ ಪ್ರಾಧ್ಯಾಪಕ ಪ್ರೊ.ಯು.ಎಸ್.ಮೂರ್ತಿ
ತುಮಕೂರು: ಅರ್ಥವ್ಯವಸ್ಥೆ ಸರಿ ಇದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ. ಯಾವ ದೇಶದಲ್ಲಿ ಆರ್ಥಿಕ ವ್ಯವಸ್ಥೆ ಸರಿಯಿಲ್ಲವೋ, ಅವುಗಳ ಪತನವನ್ನು ನಾವು ಕಣ್ಣಾರೆ ನೋಡುತ್ತಿದ್ದೇವೆ ಎಂದು ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಯು.ಎಸ್.ಮೂರ್ತಿ ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಮತ್ತು ಅರ್ಥಶಾಸ್ತ್ರ ಅಧ್ಯಯನ ಹಾಗೂ ಸಂಶೋಧನಾ ವಿಭಾಗಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಪಿಎಂ-ಉಷಾ ಸಾಫ್ಟ್ ಕಾಂಪೊನೆಂಟ್ ಯೋಜನೆಯಡಿ ಸೋಮವಾರ ಆಯೋಜಿಸಿದ್ದ "ಭಾರತದಲ್ಲಿ ಪರಂಪರೆ ಅರ್ಥವ್ಯವಸ್ಥೆ' ಎಂಬ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿಗಳ ವಿಕಸಿತ ಭಾರತದ ಪರಿಕಲ್ಪನೆಗೆ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಸದೃಢ ಭಾರತ ನಿಮಾರ್ಣಕ್ಕೆ ಯುವ ಪೀಳಿಗೆಯ ಕೊಡುಗೆ ಅಗತ್ಯ. ಜಾಗತಿಕ ಸವಾಲನ್ನು ಮೆಟ್ಟಿ ಕೌಶಲತೆ, ಪರಿಶ್ರಮದ ಮೂಲಕ ರಾಷ್ಟ್ರದ ಪ್ರಗತಿಗೆ ಕೈಜೋಡಿಸಬೇಕಿದೆ ಎಂದರು.
ವಿದ್ಯಾರ್ಥಿಗಳಿಗೆ ಆಲೋಚನೆಗಳು ಮತ್ತು ಚಿಂತನೆಗಳು ತುಂಬಾ ಅಗತ್ಯ. ನಮ್ಮ ಪರಂಪರೆ, ಸಂಸತಿ ಹಾಗೂ ಸಂಪ್ರದಾಯಗಳಿಂದ ಇಂತಹ ಆಲೋಚನೆಗಳಿಗೆ ಸರಿಯಾದ ಮಾರ್ಗದರ್ಶನ ಸಿಗುತ್ತದೆ. ಅವುಗಳನ್ನು ನೆನಪಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ಬೆಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್. ಪುಟ್ಟಸ್ವಾಮಯ್ಯ ಹೇಳಿದರು.
ತುಮಕೂರು ವಿವಿಯ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ. ರವೀಂದ್ರ ಕುಮಾರ್ ಮಾತನಾಡಿ, ಪರಂಪರೆಯ ಆರ್ಥಿಕ ವ್ಯವಸ್ಥೆಗೆ ಇತಿಹಾಸದ ಸಹಕಾರ ಅಗತ್ಯವಾಗಿದೆ. ಈ ಕಾರ್ಯಾಗಾರವು 2047ರ ವಿಕಸಿತ ಭಾರತದ ಗುರಿಗೆ ದಾರಿದೀಪವಾಗಿದೆ. ಗ್ರಾಮೀಣ ಆರ್ಥಿಕ ವ್ಯವಸ್ಥೆ ಸಬಲೀಕರಣವಾಗಲು ಗ್ರಾಮಗಳ ವಿಕಾಸವಾಗಬೇಕು. ಅದಕ್ಕೆ ಪ್ರವಾಸೋದ್ಯಮ, ಪರಂಪರೆಯ ಅರಿವು ಹಾಗೂ ಸೂಕ್ತ ಯೋಜನೆಗಳು ಅಗತ್ಯ. ಪ್ರವಾಸೋದ್ಯಮ ಕೇವಲ ಪ್ರಚಾರವಾಗದೆ, ಅದು ಪ್ರೇರಣೆಯಾಗಬೇಕು. ಈ ಇಂದಿನ ಎಐ ಯುಗದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯೂ ಡಿಜಿಟಲೀಕರಣಗೊಳ್ಳಬೇಕು ಎಂದರು.
ಇತಿಹಾಸ ಹಾಗೂ ಪುರಾತತ್ವ ವಿಭಾಗದ ಅಧ್ಯಕ್ಷ ಡಾ. ಎಲ್. ಪಿ. ರಾಜು ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಡಾ.ಎನ್.ಟಿ.ನೀಲಕಂಠ ವಂದಿಸಿದರು.