ಇ-ಸಂಪನ್ಮೂಲ ಬಳಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಿ

ಹುಳಿಯಾರು ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಶೈಕ್ಷಣಿಕ ಸಲಹೆಗಾರ ಡಾ.ಸುಷ್ಮಾ ಎಲ್​. ಬಿರಾದಾರ್​, ಕನ್ನಡ ವಿಭಾಗದ ಮುಖ್ಯಸ್ಥ ಜಗದೀಶ್​ ಇದ್ದರು.
ಹುಳಿಯಾರು ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಶೈಕ್ಷಣಿಕ ಸಲಹೆಗಾರ ಡಾ.ಸುಷ್ಮಾ ಎಲ್​. ಬಿರಾದಾರ್​, ಕನ್ನಡ ವಿಭಾಗದ ಮುಖ್ಯಸ್ಥ ಜಗದೀಶ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇ-ಸಂಪನ್ಮೂಲ ಬಳಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಿ
ಹುಳಿಯಾರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಾರು ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಪಡೆದುಕೊಳ್ಳುತ್ತಾರೋ ಅವರೇ ಯಶಸ್ವಿಯಾಗುತ್ತಾರೆ. ವಿದ್ಯಾರ್ಥಿಗಳು ಇಂತಹ ವಿಶೇಷ ಉಪನ್ಯಾಸಗಳ ಸದುಪಯೋಗ ಪಡೆದುಕೊಂಡು ತಮ್ಮ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್​.ಸಿ.ವೀರಣ್ಣ ತಿಳಿಸಿದರು.
ಪಟ್ಟಣದ ಬಿಎಂಎಸ್​ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಜಂಟಿ ಆಶ್ರಯದಲ್ಲಿ ಶೈಕ್ಷಣಿಕ ಮತ್ತು ವೃತ್ತೀಜಿವನದ
ಉತ್ಕೃಷ್ಣತೆಗಾಗಿ ಮಾಹಿತಿ ಮರುಪಡೆಯುವಿಕೆ ಕೌಶಲಗಳು ಎಂಬ ವಿಷಯದ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟಿರುವ ಆನ್​ಲೈನ್​ ವೇದಿಕೆಗಳನ್ನು ಮತ್ತು ಕಾಲೇಜಿನ ಗ್ರಂಥಾಲಯದಲ್ಲಿರುವ ಅತ್ಯುತ್ತಮ ಇ&-ಸಂಪನ್ಮೂಲಗಳ ಸೌಲಭ್ಯವನ್ನು ದಿನನಿತ್ಯದ ಅಧ್ಯಯನದಲ್ಲಿ ಬಳಸಿಕೊಳ್ಳುವ ಮೂಲಕ ಉದ್ಯೋಗ ಮಾರುಕಟ್ಟೆಯಲ್ಲಿ ತಮಗಿರುವ ಅವಕಾಶಗಳನ್ನು ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಗ್ರಂಥಪಾಲಕ ಹಾಗೂ ಕಾರ್ಯಕ್ರಮದ ಸಂಘಟಕ ಜೆ.ಮೋಹನ್​ ಕುಮಾರ್​ ಮಾತನಾಡಿ, ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಕೇವಲ ಇಂಟರ್​ನೆಟ್​ ಬಳಸುವುದು ಮುಖ್ಯವಲ್ಲ, ಬದಲಿಗೆ ಜ್ಞಾನದ ಸಾಗರದಿಂದ ನಮಗೆ ಅಗತ್ಯವಿರುವ ನಿಖರ ಮತ್ತು ಅಧಿಕೃತ ಮಾಹಿತಿಯನ್ನು ಹೇಗೆ ಹುಡುಕಬೇಕು ಎಂಬ ಕೌಶಲ ಅತ್ಯಂತ ಪ್ರಮುಖವಾಗಿದೆ ಎಂದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಹಾಲಕ್ಷಿ$್ಮ ಮಾತನಾಡಿ. ವಿದ್ಯಾರ್ಥಿಗಳು ಕೇವಲ ಗೂಗಲ್​ ಸರ್ಚ್​ಗೆ ಸೀಮಿತವಾಗದೆ, ಅಂತಾರಾಷ್ಟ್ರೀಯಮಟ್ಟದ ಸರ್ಚ್​ಇ-ಜಿನ್​ಗಳು ಮತ್ತು ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿರುವ ಡಿಜಿಟಲ್​ ಲೈಬ್ರರಿಗಳನ್ನು ಬಳಸಿಕೊಳ್ಳಬೇಕು ಎಂದರು.
ಸಂಚಾಲಕಿ ಡಾ.ಕೆ.ಬಿ.ಸರಸ್ವತಿ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಅಳೆಯುವಲ್ಲಿ ಇಂತಹ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ, ಜಾಗತಿಕಮಟ್ಟದ ಇ-ಸಂಪನ್ಮೂಲಗಳು ಮತ್ತು ರ್ಜನಲ್​ಗಳನ್ನು ಬಳಸಿಕೊಳ್ಳುವ ಕೌಶಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಯೋಗೇಶ್​ ಮಾತನಾಡಿ, ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಲ್ಲ, ಅವು ಜ್ಞಾನದ ವಿಕಾಸ ಕೇಂದ್ರಗಳು. ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಲಭ್ಯವಿರುವ ಅತ್ಯಾಧುನಿಕ ಡಿಜಿಟಲ್​ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಶೈಕ್ಷಣಿಕ ಗುರಿಗಳನ್ನು ತಲುಪಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net