ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಮಾಡಿ

ಶಿರಾ ತಾಲೂಕಿನ ಯಂಜಲಗೆರೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ, ಡಾ.ಸಿ.ಎಂ.ರಾಜೇಶ್​ ಗೌಡ,  ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ ಇತರರು ಇದ್ದರು.
ಶಿರಾ ತಾಲೂಕಿನ ಯಂಜಲಗೆರೆಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ, ಡಾ.ಸಿ.ಎಂ.ರಾಜೇಶ್​ ಗೌಡ, ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಮಾಡಿ
ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಮಾಡಿ

ಪಟ್ಟನಾಯಕನಹಳ್ಳಿ :

ರಾಜ್ಯದ ಮಹತ್ವಕಾಂಕ್ಷೆಯ ಮೇಕೆದಾಟು ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಿ, ಬೆಂಗಳೂರು ಸೇರಿ ರಾಜ್ಯದ ಹಲವಾರು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತಹ ಇಚ್ಛಾಸಕ್ತಿಯನ್ನು ರಾಜ್ಯ ಸರ್ಕಾರ ತೋರಿಸಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಶಿರಾ ತಾಲೂಕಿನ ಯಂಜಲಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಫೀಡರ್​ ಕೆನಾಲ್​ಗೆ ನಮ್ಮ ವಿರೋಧವಿಲ್ಲ. ಆದರೆ ತುಮಕೂರು ಜಿಲ್ಲೆ 24 ಟಿಎಂಸಿ ನೀರು ಅಲೋಕಶನ್​ ಆಗಿದ್ದು, ಈ ನೀರನ್ನು ಜಿಲ್ಲೆಗೆ ಸಮರ್ಪಕವಾಗಿ ಕೊಟ್ಟು ಹೆಚ್ಚುವರಿ ನೀರನ್ನು ಬೇರೆ ಜಿಲ್ಲೆಗೆ ಹರಿಸಿಕೊಳ್ಳಲಿ ಎಂದರು.
ಶಿರಾ ತಾಲೂಕಿನ ಮದಲೂರು ಕೆರೆಗೆ ಹೇಮಾವತಿ ನೀರು ಹರಿದ ಕಾರಣ ಆಂಧ್ರಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗಿದೆ. ಆದ್ದರಿಂದ ತಾಲೂಕಿನ ಅಂತರ್ಜಲ ಹೆಚ್ಚಬೇಕಾದರೆ, ಕುಡಿಯುವ ನೀರಿನ ಸಮಸ್ಯೆ ನೀಗಬೇಕೆಂದರೆ ಎಲ್ಲ ಕೆರೆಗಳಿಗೂ ನೀರು ಹರಿಸುವ ಕೆಲಸ ಮಾಡಬೇಕು ಎಂದರು.
371ಜೆ ಕಲಂ ಪ್ರಕಾರ ಕಲ್ಯಾಣ ಕರ್ನಾಟಕದ ಯುವಕರಿಗೆ ಹೆಚ್ಚು ಉದ್ಯೋಗ ಸಿಗುತ್ತಿವೆ, ಆದರೆ ಮಧ್ಯ ಕರ್ನಾಟಕದ ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಆದಕಾರಣ ನಂಜುಂಡಪ್ಪ ವರದಿ ಅನುಷ್ಠಾನ ಮಾಡಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚು ಗಮನಹರಿಸಿ ತಾರತಮ್ಯ ನಿವಾರಿಸುವಂತಹ ಕೆಲಸ ಸರ್ಕಾರ ಮಾಡಬೇಕು ಎಂದರು.
ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್​ ಗೌಡ ಮಾತನಾಡಿ, ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿವಿಧಾನಗಳಾಗಿವೆ. ಧಾರ್ಮಿಕ ಕಾರ್ಯಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ ಅವುಗಳ ಮಹತ್ವ ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಶಿರಾ ಕನಕ ಬ್ಯಾಂಕ್​ ಅಧ್ಯಕ್ಷ ಬಿ.ಕೆ.ಮಂಜುನಾಥ್​, ಶಿರಾ ಜೆಡಿಎಸ್​ ನಾಯಕ ಆರ್​.ಉಗ್ರೇಶ್​, ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯ ಪ್ರಕಾಶ್​, ಮುಖಂಡರಾದ ಜಯಪ್ರಕಾಶ್​, ಮೂರ್ತಿ ಯಂಜಲಗರೆ, ರಾಕೇಶ್​ ಬಾಬು, ತಿಪ್ಪೇಶ್​ ಗೌಡ, ಬಾಲೆಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಸಿದ್ದಮ್ಮ, ವೈ.ಕೆ.ತಿಪ್ಪೇಸ್ವಾಮಿ, ಚಿಕ್ಕಸಿದ್ದಪ್ಪ, ಒಬಣ್ಣ, ಶಾಸಮಾರು ಶ್ರೀಧರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net