ತುಮಕೂರು: ಹಣಕಾಸು ವಿವಾದಕ್ಕೆ ಸಂಬಂಧಪಟ್ಟ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಠಾಣೆ ಪಿಎಸ್ ಐ ಸಾಗರ್ ಅಸ್ಕಿ ಸೇವೆಯಿಂದ ಅಮಾನತುಗೊಳಿಸಿ ಕೇಂದ್ರ ವಲಯ ಐಜಿಪಿ ಗಿರೀಶ್ ಆದೇಶಿಸಿದ್ದಾರೆ.
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಅಸ್ಸಾಂ ರಾಜ್ಯಕ್ಕೆ ಶುಕ್ರವಾರ ವಿಮಾನ ಪ್ರಯಾಣ ನಡೆಸಿದ್ದ ಎಎಸ್ ಐ ಹಾಗೂ ಒಬ್ಬ ಸಿಬ್ಬಂದಿಗೂ ಶಾಕ್ ನೀಡಲಾಗಿದೆ.
ಮೇಲಾಧಿಕಾರಿಗಳ ಅನುಮತಿ ಪಡೆಯದೇ ಅಸ್ಸಾಂಗೆ ತೆರಳಿರುವ ಎಎಸ್ ಐ ಚಂದ್ರಶೇಖರ್, ಕಾನ್ಸ್ ಟೇಬಲ್ ರಂಗಧಾಮಯ್ಯ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಶುಕ್ರವಾರ ಆದೇಶಿಸಿದ್ದಾರೆ.
ಹೊರರಾಜ್ಯದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಅಸ್ಸಾ ರಾಜ್ಯದ ಪೊಲೀಸರು ನೀಡಿದ ಮಾಹಿತಿಯ ನಂತರವೇ ಸಿಬ್ಬಂದಿ ತೆರಳಿರುವ ವಿಷಯ ಮೇಲಾಧಿಕಾರಿಗಳಿಗೆ ತಿಳಿದಿರುವುದು ಅಮಾನತು ಆದೇಶಕ್ಕೆ ಕಾರಣ ಎನ್ನಲಾಗಿದೆ.