ತುಮಕೂರಿನ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪವಾಡ ಬಯಲು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ರನ್ನು ಅಭಿನಂದಿಸಲಾಯಿತು. ಚೆನ್ನಬಸವ ಪ್ರಸಾದ್, ಕ್ಯಾಲೆಂಡರ್ ಶಿವಕುಮಾರ್, ಡಾ.ಸಾಯಿ ಪ್ರಸಾದ್, ಮುನಿಗಂಗಪ್ಪ,ಮಿಥಿಲಾ, ಕೆ.ವನಿತಾ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಶೇಷ ಪವಾಡ ಬಯಲು, ಜಾಗೃತಿ ಕಾರ್ಯಕ್ರಮ
ವಿದ್ಯಾನಿಕೇತನ ಪ್ರೌಢಶಾಲೆ
ಪವಾಡ ಭಂಜಕ ಹುಲಿಕಲ್ ನಟರಾಜ್
ತುಮಕೂರು: ಮನೆಯ ವಾಸ್ತುವಿಗಿಂತ ಮನಸ್ಸಿನ ವಾಸ್ತುವಿನ ಕಡೆ ಗಮನವಿರಲಿ ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದರು.
ನಗರದ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪವಾಡ ಬಯಲು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚಾಂಗ ನೋಡುವುದಕ್ಕಿಂತ ನಮ್ಮ ದೇಹದ ಪಂಚ ಅಂಗಗಳ ಕಡೆ ಗಮನ ನೀಡಿ ಎಂದರು.
ಮನುಷ್ಯ ಕಂಡುಹಿಡಿದ ತಂತ್ರಜ್ಞಾನ ಸದಾ ಅಪ್ಡೇಟ್ ಆಗುತ್ತಿದೆ, ಆದರೆ ಮನುಷ್ಯನ ಮನಸ್ಸು ಮಾತ್ರ ಔಟ್ ಡೇಟೆಡ್ ಆಗುತ್ತಿದೆ. ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಬೇಕೇ ಹೊರತು ಅದಕ್ಕೆ ದಾಸರಾಗಬಾರದು. ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹದಿಂದ ದೂರ ಸರಿದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜ್ಞಾನವೇ ನಿಜವಾದ ಶಕ್ತಿ. ಇಂದಿನ ಶಿಕ್ಷಣ ಮಾರುಕಟ್ಟೆಯ ಸರಕಾಗುವುದಕ್ಕಿಂತ ಮಾನವೀಯತೆಯ ಸರಕಾಗಬೇಕಿದೆ. ಶಿಕ್ಷಣವು ಕೇವಲ ಪರೀಕ್ಷೆಗಾಗಿ ಇರದೆ, ಪ್ರತಿಭಾವಂತರನ್ನು ಮತ್ತು ಪ್ರಜ್ಞಾವಂತರನ್ನು ಸೃಷ್ಟಿಸಬೇಕು ಎಂದು ಹೇಳಿದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಚೆನ್ನಬಸವ ಪ್ರಸಾದ್, ಕ್ಯಾಲೆಂಡರ್ ಶಿವಕುಮಾರ್, ಜಂಟಿ ಕಾರ್ಯದರ್ಶಿ ಡಾ.ಸಾಯಿ ಪ್ರಸಾದ್, ಹಿರಿಯ ಕಾರ್ಯ ನಿರ್ವಾಹಕ ಸದಸ್ಯ ಮುನಿಗಂಗಪ್ಪ, ಶೈಕ್ಷಣಿಕ ಸಂಯೋಜಕಿ ಮಿಥಿಲಾ, ಮುಖ್ಯೋಪಾಧ್ಯಾಯಿನಿ ಕೆ.ವನಿತಾ ಉಪಸ್ಥಿತರಿದ್ದರು.
ಸಮಾಜದಲ್ಲಿರುವ ಮೂಢನಂಬಿಕೆಗಳು ಅಳಿಯಬೇಕು ಹಾಗೂ ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಚಿಂತನೆ ಬೆಳೆಯಬೇಕು. ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಅಂಕ ಗಳಿಸುವ ಯಂತ್ರಗಳನ್ನು ಸೃಷ್ಟಿಸಬಾರದು. ಅದು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಬೇಕು.