ಹುಟ್ಟೂರ ಸನ್ಮಾನ ಖುಷಿ ನೀಡಲಿದೆ

Hometown honors will bring joy
Hometown honors will bring joy
Published on
ಬರಗೂರು: ಬಾಲ್ಯದಲ್ಲಿದ್ದಾಗ ಕಥೆ, ಕಾದಂಬರಿಗಳನ್ನು ಓದದೆ ಇದ್ದಿದ್ದರೆ ಇಂದು ಸಾಹಿತಿಯಾಗಿ, ಕವಿಯಾಗಿ, ವಿಮರ್ಶಕನಾಗಿ ಜತೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷನಾಗಿ ನೇಮಕಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರನ ಅಧ್ಯಕ್ಷ ಡಾ.ಚೆನ್ನಪ್ಪ ಕಟ್ಟಿ ತಮ್ಮ ಬಾಲ್ಯ ಜೀವನ ನೆನೆಸಿಕೊಂಡರು
ಶಿರಾ ತಾಲೂಕಿನ ದ್ವಾರನಕುಂಟೆ ಕಾಳಿದಾಸ ಪ್ರೌಢಶಾಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲೆಯಿಂದ ಗೌರವ ಡಾಕ್ಟರೇಟ್​ ಪದವಿ ಪಡೆದ ಪ್ರಸಿದ್ಧ ಲೇಖಕ ದ್ವಾರನಕುಂಟೆ ಡಾ.ಪಾತಣ್ಣ ಅವರಿಗೆ ಹಾಗೂ ಎಸ್​ಎಸ್​ಎಲ್​ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಗೌರವ ಡಾ.ಪದವಿ ಪಡೆದ ಡಾ.ಪಾತಣ್ಣ ಅವರು ಈ ಶಾಲೆಯ ಗ್ರಂಥಾಲಯಕ್ಕೆ ಕಥೆ, ಕಾದಂಬರಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಲೇಖಕ ಡಾ.ಪಾತಣ್ಣ ಮಾತನಾಡಿದರು. ಸಾಹಿತಿ ಡಾ.ದ್ವಾರನ ಕುಂಟೆ ಲಕ್ಷ$್ಮಣ್​, ಶಿಕ್ಷಕರಾದ ಶ್ರೀನಿವಾಸ್​ ಮೂರ್ತಿ, ತಿಪ್ಪೇಸ್ವಾಮಿ, ಬಸವರಾಜು, ರಾಮಪ್ಪ ದೇವರಮನಿ, ಮಹಾಲಿಂಗಪ್ಪ, ಚೈತ್ರಾ, ಜಗದೀಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net