16 ಕೋಟಿ 52 ಕೊಠಡಿಗಳು: ಕರ್ನಾಟಕ ಪಬ್ಲಿಕ್ ಸ್ಕೂಲ್ ಉನ್ನತಿಕರಣಗೊಂಡ ಹಿನ್ನೆಲೆ ಎಲ್ಕೆಜಿ ಯಿಂದ ಪಿಯುಸಿವರೆಗೆ ಗಮನದಲ್ಲಿಟ್ಟುಕೊಂಡು ಅಜಾಕ್ಸ್ ಇಂಜಿನಿಯರಿಂಗ್ ಚಾರಿಟಬಲ್ ಟ್ರಸ್ಟ್ 16 ಕೋಟಿ ರೂ., ವೆಚ್ಚದಲ್ಲಿ ಈ ಶಾಲೆ ಪುನರ್ ನಿರ್ಮಾಣಕ್ಕೆ ಯೋಜನೆ ರೂಪಿಸಿತು. ಕಳೆದ ವರ್ಷ ಜೂನಲ್ಲಿ ಶಾಲೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು 11 ತಿಂಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ನೆಲ ಅಂತಸ್ತು ಹಾಗೂ ಎರಡೂ ಮಹಡಿಗಳಲ್ಲಿ 52 ಕೊಠಡಿಗಳು ನಿರ್ಮಿಸಿದ್ದು ಕಲಿಕಾಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಭೌತಶಾಸ್ತ್ರ, ರಸಾಯನಶಾಸ್ತ್ರ ಪ್ರಯೋಗಾಲಯಗಳು, ಗ್ರಂಥಾಲಯ ಅಲ್ಲದೆ, ಸ್ಮಾರ್ಟ್ ಕ್ಲಾಸ್ಗಳನ್ನು ಸಹ ನಿರ್ಮಿಸಲಾಗಿದೆ. ಪ್ರತಿ ಮಹಡಿಯಲ್ಲಿ ಹೆಣ್ಣ ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಹೈಟೆಕ್ ಶೌಚಾಗೃಹಗಳನ್ನು ಸಹ ನಿರ್ಮಿಸಲಾಗಿದೆ. ಸದ್ಯಕ್ಕೆ ನೆಲ ಹಾಗೂ ಮೊದಲ ಮಹಡಿ ಕೊಠಡಿಗಳು ಬಳಕೆಗೆ ಪೂರ್ಣವಾಗಿ ಸಿದ್ಧವಾಗಿದ್ದು ಎಲ್ಕೆಜಿಯಿಂದ 9ನೇ ತರಗತಿಗಳನ್ನು ನಡೆಸಲಾಗುತ್ತಿದೆ. ಮುಂದಿನ ವರ್ಷ ಪಿಯುಸಿ ಆರಂಭವಾಗಲಿದೆ.