ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಮಂಜುನಾಥ್ಜೋಗಿ ಮಾತನಾಡಿ, ಸುಪ್ರಿಂಕೋರ್ಟ್ ಆದೇಶದಂತೆ ಅತಿಥಿ ಉಪನ್ಯಾಸಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಜತೆಗೆ, ಸತತ 10 ವರ್ಷಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಕಾಯಂ ಗೊಳಿಸಬೇಕು ಎಂಬ ಆದೇಶವನ್ನು ಪಾಲಿಸುತ್ತಿಲ್ಲ. ಬದಲಿಗೆ ಯುಜಿಸಿ ನಿಯಮದ ಕೆಲವೇ ಅಂಶಗಳನ್ನು ಮುಂದಿಟ್ಟು, ನೀವು ನೆಟ್, ಸ್ಲಟ್,ಎಂ.ಫೀಲ್, ಪಿಹೆಚ್ಡಿ ಪಡೆದಿಲ್ಲ.ಹಾಗಾಗಿ ನೀವು ಆರ್ಹರಲ್ಲಎಂದು ಬೀದಿಗೆ ತಳ್ಳಲು ಹೊರಟಿದೆ. ನಮ್ಮ ಪಾಠ ಕೇಳಿ ಪದವೀಧರರಾದವರು ಅರ್ಹ ಪದವಿಧರರೇ ? ಈ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕು ಎಂದರು.