ಖಾಸಗಿಯವರ ವಶದಲ್ಲಿರುವ ಹಳೇ ಗ್ರಾಪಂ ಜಾಗದಲ್ಲಿನ ಅಂಗಡಿ ಮಳಿಗೆ ತೆರವು ಮಾಡುವಂತೆ ಒತ್ತಾಯಿಸಿ ತಾಲೂಕು ದಲಿತ ಸಂಟನೆಗಳ ಒಕ್ಕೂಟದ ಮುಖಂಡರು ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮುಖಂಡರಾದ ರಮೇಶ, ದೇವರಾಜು, ರಾಜು, ಮಲ್ಲೇಶ್, ಲೋಕೇಶ್ ಮತ್ತು ಬೋರಲಿಂಗ ಪಾಳ್ಯದ ಗ್ರಾಮಸ್ಥರಾದ ತಿಮ್ಮಪ್ಪ, ನಾಗರಾಜು, ಗರುಡರಂಗಯ್ಯ, ಲಕ್ಕಮ್ಮ, ಗೌರಮ್ಮ, ಲಲಿತಮ್ಮ ಮತ್ತಿತರರು ಇದ್ದರು.