ಗ್ರಾಮೀಣ ಮಕ್ಕಳ ಕಲಿಕೆಗೆ ಉತ್ತಮ‌ ಕಲಿಕಾ ವಾತಾವರಣ

ತಿಪಟೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎಸ್​ಆರ್​ ನಿಧಿ ಅಡಿ ನಿರ್ಮಿಸಿರುವ ಶೌಚಾಗೃಹ ಹಾಗೂ ಕಂಪ್ಯೂಟರ್​ ಲ್ಯಾಬ್​ ಅನ್ನು  ಗೋಕಲ್​ದಾಸ್​ ಎಕ್ಸ್​ಪೋರ್ಟ್​ ಸಿಇಒ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಮಹಾಂತೇಶ ಬಂಗಾರಿ, ಎಂ.ಡಿ.ಶಿವಕುಮಾರ್​, ಕೆ.ಟಿ.ರಾಜೇಂದ್ರಪ್ರಸಾದ್​, ಗಿರೀಶ್​ಗೌಡ, ಲೋಕೇಶ್​, ರವೀಂದ್ರ ಮತ್ತಿತರರು ಇದ್ದರು.
ತಿಪಟೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎಸ್​ಆರ್​ ನಿಧಿ ಅಡಿ ನಿರ್ಮಿಸಿರುವ ಶೌಚಾಗೃಹ ಹಾಗೂ ಕಂಪ್ಯೂಟರ್​ ಲ್ಯಾಬ್​ ಅನ್ನು ಗೋಕಲ್​ದಾಸ್​ ಎಕ್ಸ್​ಪೋರ್ಟ್​ ಸಿಇಒ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಮಹಾಂತೇಶ ಬಂಗಾರಿ, ಎಂ.ಡಿ.ಶಿವಕುಮಾರ್​, ಕೆ.ಟಿ.ರಾಜೇಂದ್ರಪ್ರಸಾದ್​, ಗಿರೀಶ್​ಗೌಡ, ಲೋಕೇಶ್​, ರವೀಂದ್ರ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೋಕಲ್​ದಾಸ್​ ಎಕ್ಸ್​ ಪೋರ್ಟ್​ ಫೌಂಡೇಶನ್​
  • ಕಂಪ್ಯೂಟರ್​ ಲ್ಯಾಬ್​, ಶೌಚಾಗೃಹ ನಿರ್ಮಾಣ
  • ತಿಪಟೂರು ಸರ್ಕಾರಿ ಪಿಯು ಕಾಲೇಜು
ತಿಪಟೂರು : ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಗೋಕಲ್​ದಾಸ್​ ಎಕ್ಸ್​ಪೋರ್ಟ್​ ಫೌಂಡೇಶನ್​ ವತಿಯಿಂದ ಸಿಎಸ್​ಆರ್​ ನಿಧಿ ಅಡಿ ನಿರ್ಮಿಸಿರುವ " ಸುಸಜ್ಜಿತವಾದ ಶೌಚಾಗೃಹ' ಕಟ್ಟಡ ಹಾಗೂ ಡಿಜಿಟಲ್​ ಎಜುಕೇಷನ್​ ಕಾರ್ಯಕ್ರಮದಡಿಯಲ್ಲಿ ಕಂಪ್ಯೂಟರ್​ ಲ್ಯಾಬ್​ ಅನ್ನು ಸೋಮವಾರ ಲೋಕಾರ್ಪಣೆ ಮಾಡಲಾಯಿತು.
ಸರ್ಕಾರಿ ಶಾಲಾ ಮಕ್ಕಳಲ್ಲಿ ಆಧುನಿಕ ಮತ್ತು ಪ್ರಾಯೋಗಿಕ ಶಿಕ್ಷಣ ಮಹತ್ವವನ್ನು ವೃದ್ಧಿಸಲು ಹಾಗೂ ಸ್ವಚ್ಛ , ಸುಸಜ್ಜಿತ ಶೌಚಾಗೃಹ ಸೌಲಭ್ಯವನ್ನು ಒದಗಿಸಲಾಗಿದೆ. ಆ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಶಿಕ್ಷಣ ಸೌಲಭ್ಯವು ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಿಕ್ಕಿ ಹೆಚ್ಚಿನ ಪ್ರಗತಿ ಹೊಂದಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದು ಗೋಕಲ್​ದಾಸ್​ ಎಕ್ಸ್​ಪೋರ್ಟ್​ ಸಿಇಒ ಬಾಲಕೃಷ್ಣ ಶೆಟ್ಟಿ ಹೇಳಿದರು.
ವಿದ್ಯಾರ್ಥಿಗಳ ಆರೋಗ್ಯ ಮತ್ತು ಕಲಿಕಾ ವಾತಾವರಣ ಮತ್ತಷ್ಟು ಉತ್ತಮಗೊಳ್ಳಲಿದೆ. ಮೂಲಸೌಕರ್ಯ ಅಭಿವೃದ್ಧಿಯನ್ನು ಸಮನ್ವಯಗೊಳಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ನೆರವಾಗಲಿದೆ. ಸಮಾಜ ಭವಿಷ್ಯವನ್ನು ರೂಪಿಸುವ ಯುವಜನತೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಅಭಿವೃದ್ಧಿ ಕಾರ್ಯಗಳು ಮುಂದಿನ ಪೀಳಿಗೆಗೆ ಬಲವಾದ ಅಡಿಪಾಯಾಗಲಿವೆ ಎಂದರು.
ಶಿಕ್ಷಣ ಪರಿಸರ ಸಂರಕ್ಷಣೆ, ಆರೋಗ್ಯ, ಕೌಶಲಾಭಿವೃದ್ಧಿ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ವಿವಿಧ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿದ್ದು, ಸಮಾಜ ಸಮಗ್ರ ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಮುಂದುವರೆಸಿದೆ ಎಂದು ಎಕ್ಸ್​ಪೋರ್ಟ್​ ಸಿಎಸ್​ಆರ್​ ಮತ್ತು ಇಎಚ್​ಎಸ್​ ಜನರಲ್​ ಮ್ಯಾನೇಜರ್​ ಮಹಾಂತೇಶ ಬಂಗಾರಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಶಿವಕುಮಾರ್​ ಅಧ್ಯಕ್ಷತೆವಹಿಸಿದ್ದರು. ಸಿಎಸ್​ಆರ್​ ಮುಖ್ಯಸ್ಥ ಕೆ.ಟಿ. ರಾಜೇಂದ್ರ ಪ್ರಸಾದ್​, ಗಿರೀಶ್​ಗೌಡ ,ಲೋಕೇಶ್​, ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net