ತುಮಕೂರಿನಲ್ಲಿ "ಜನರೇಷನ್​ ಝೆಡ್​' ಅಂಚೆ ಕಚೇರಿ

ತುಮಕೂರಿನ ಶ್ರೀಸಿದ್ಧಾರ್ಥ ಮೆಡಿಕಲ್​ ಆವರಣಲದಲ್ಲಿ  ಜನರೇಷನ್​ ಝೆಡ್​(ಝೆನ್​&ಜೀ) ಅಂಚೆ ಕಚೇರಿ.
ತುಮಕೂರಿನ ಶ್ರೀಸಿದ್ಧಾರ್ಥ ಮೆಡಿಕಲ್​ ಆವರಣಲದಲ್ಲಿ ಜನರೇಷನ್​ ಝೆಡ್​(ಝೆನ್​&ಜೀ) ಅಂಚೆ ಕಚೇರಿ.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಜನರ ಸೆಳೆಯಲು ಭಾರತೀಯ ಅಂಚೆ ಪ್ರಯತ್ನ
  • ಗ್ರಾಹಕರಿಗೆ ಎಸಿ, ವೈಫೈ, ಕಾಫಿ ಎಲ್ಲವೂ ಲಭ್ಯ
  • ಸಿದ್ಧಾರ್ಥ ಮೆಡಿಕಲ್​ ಕಾಲೇಜು ಬಳಿ ಹೈಟೆಕ್​ ಪೋಸ್ಟ್​ ಆಫೀಸ್​
ತುಮಕೂರು: ಯುವ ಸಮುದಾಯವನ್ನು ಅಂಚೆ ಸೇವೆಯತ್ತ ಸೆಳೆಯಲು ಆಧುನೀಕರಣದತ್ತ ಹೆಜ್ಜೆ ಹಾಕಿರುವ ಭಾರತೀಯ ಅಂಚೆ ನಗರದ ಶ್ರೀಸಿದ್ಧಾರ್ಥ ವೈದ್ಯಕಿಯ ಕಾಲೇಜು ಆವರಣದಲ್ಲಿ ದಣ ಕರ್ನಾಟಕ ಅಂಚೆ ವಲಯದ ಮೊದಲ ಜನರೇಷನ್​ ಝೆಡ್​(ಝೆನ್​&ಜೀ) ಅಂಚೆ ಕಚೇರಿ ಆರಂಭಿಸಿದೆ.
ಭಾರತೀಯ ಅಂಚೆ ಇಲಾಖೆ ಯುವಜನರನ್ನು ಆಕರ್ಷಿಸಲು ಮತ್ತು ಡಿಜಿಟಲ್​ ಯುಗಕ್ಕೆ ತಕ್ಕಂತೆ ಅಂಚೆ ಕಚೇರಿಗಳನ್ನು ಆಧುನೀಕರಿಸುವ ನೂತನ ಪರಿಕಲ್ಪನೆಯಾಗಿ "ಜನರೇಷನ್​ ಝಡ್​ ಪೋಸ್ಟ್​ ಆಫೀಸ್​' ರೂಪಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಕಚೇರಿಗೆ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಂಚೆ ಅಧೀಕ್ಷಕ ಬಿ.ಎಂ.ಶಂಕರಪ್ಪ, ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ ಮತ್ತಿತರರು ಇದ್ದರು.
ಕೆಫೆ ಮಾದರಿ ವಿನ್ಯಾಸ, ಉಚಿತ ವೈೈ, ಸೆಲ್ಫಿ ಪಾಯಿಂಟ್​, ಮತ್ತು ಸ್ವಯಂ- ಬುಕಿಂಗ್​ ಕಿಯೋಸ್ಕ್​ ಗಳಂತಹ ತ್ವರಿತ ಸೌಲಭ್ಯಗಳನ್ನು ಹೊಂದಿರುವ ಈ ಝೆನ್​&ಜೀ) ಇಮೇಲ್​, ವಾಟ್ಸಾಪ್​ ಮೂಲಕ ಯುವಜನರನ್ನು ಆಕರ್ಷಿಸುತ್ತಿದೆ. ಅಂಚೆ ಕಚೇರಿ ಹಳೆಯ ಕಾಲದ್ದಂತಿಲ್ಲ, ಅಷ್ಟೇ ಅಲ್ಲದೇ ವಿದ್ಯಾರ್ಥಿಗಳೇ ಇದರ ವಿನ್ಯಾಸ ಮಾಡಿದ್ದಾರೆ.
ಜೆನ್​ಜಿ ಅಂಚೆ ಕಚೇರಿಯನ್ನು ಸೃಜನಾತ್ಮಕವಾಗಿ ವಿನ್ಯಾಸಗೊಳಿಸಿದ್ದು, ಸಾಮೂಹಿಕ ಸಂವಹನದೊಂದಿಗೆ ಆರಾಮದಾಯಕವಾಗಿ ಕೆಲಸ ಮಾಡುವ ವಿದ್ಯಾರ್ಥಿ ಕೇಂದ್ರಿತ ಸ್ಥಳವನ್ನಾಗಿ ಪರಿವರ್ತಿಸಲಾಗಿದೆ. ಕಚೇರಿ ಸ್ವಯಂ ಬುಕಿಂಗ್​ ಕಿಯೋಸ್ಕ್​ ಮತ್ತು ಕ್ಯೂ ಆರ್​ ಕೋಡ್​ ಆಧಾರಿತ ತ್ವರಿತ ಪಾವತಿ ಸೇವೆ ಒಳಗೊಂಡಿದೆ.
ಎಲ್ಲರಿಗೂ ಉಚಿತ ವೈಫೈ ಸೌಲಭ್ಯ, ಆರಾಮದಾಯಕ ಆಸನ ವ್ಯವಸ್ಥೆ, ಲ್ಯಾಪ್​ಟಾಪ್​ ಮತ್ತು ಮೊಬೈಲ್​ ಚಾರ್ಜಿಂಗ್​ ಪಾಯಿಂಟ್​ಗಳು ಹಾಗೂ ಕಾಫಿ ವೆಂಡಿಂಗ್​ ಯಂತ್ರ ಅಳವಡಿಸಲಾಗಿದೆ. ಸಂದರ್ಶಕರು ಜನ್​ಜಿ ಅಂಚೆ ಕಚೇರಿಯಲ್ಲಿನ "ಮೈ ಸ್ಟಾಂಪ್​' ಕೌಂಟರ್​ನಲ್ಲಿ ಮುದ್ರಿತ ವೈಯಕ್ತಿಕಗೊಳಿಸಿದ ಅಂಚೆ ಚೀಟಿಗಳನ್ನು ಪಡೆಯುವ ವ್ಯವಸ್ಥೆ ಕೂಡ ಮಾಡಲಾಗಿದೆ.
ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ ಎಂಬ ಧ್ಯೆಯವಾಕ್ಯದಡಿ ಈ ಹೈಟೆಕ್​ ಅಂಚೆ ಕಚೇರಿ ಕಾರ್ಯನಿರ್ವಹಿಸಲಿದೆ. ಇದು ಪಾರ್ಸೆಲ್​ ಪ್ಯಾಕೇಜಿಂಗ್​ ಸೇವೆಗಳನ್ನು ಸಹ ಒದಗಿಸಲಿದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಸಮಯ ಉಳಿಸಿ, ಒತ್ತಡ ಕಡಿಮೆ ಮಾಡುತ್ತದೆ. ಅಲ್ಲದೆ, ಅಧ್ಯಯನ ಮಾಡುವ ಸ್ಥಳದಿಂದ ನೇರ ಅವರ ವಸ್ತುಗಳನ್ನು ಸಾಗಿಸಲು ಅಥವಾ ಕಳುಹಿಸಲು ಸುಲಭ ಮತ್ತು ಸುರಕ್ಷಿತ ಸ್ಥಳವಾಗಿದೆ. ಭಾರತೀಯ ಅಂಚೆ ದೇಶಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಜೆನ್​ಝೀ ಅಂಚೆ ಕಚೇರಿಗಳನ್ನು ಆರಂಭಿಸುತ್ತಿದೆ.
ಜನರೇಷನ್​ ಝೆಡ್​ ಪೋಸ್ಟ್​ ಆಫೀಸ್​ ವಿಶೇಷತೆ:
-ವರ್ಕ್​ ಕೆಫೆ ಶೈಲಿಯ ಇಂಟೀರಿಯರ್​, ನಿಯಾನ್​ ಸೈನ್​ಗಳು ಮತ್ತು ಓದಲು ಲೈಬ್ರರಿ
-ಹೈ-ಸ್ಪೀಡ್​ ಇಂಟರ್​ನೆಟ್​, ಡಿಜಿಟಲ್​ ಪಾವತಿ ಸೌಲಭ್ಯ ಮತ್ತು ಕ್ರಿಯೇರ್ಟಸ್​ ಡೆಸ್ಕ್​ ಸೇವೆ
-ಗೇಮ್​ ಝೊನ್​, ಸೆಲ್ಫಿ ಪಾಯಿಂಟ್​,ಮತ್ತು ಉಚಿತ ಕಾಫಿ, ಚಹಾ ಸೌಲಭ್ಯ
-ಅಂಚೆ, ಉಳಿತಾಯ ಯೋಜನೆಗಳು ಮತ್ತು ಇಂಡಿಯಾ ಪೋಸ್ಟ್​ ಪೇಮೆಂಟ್ಸ್​ ಬ್ಯಾಂಕ್​ ಸೇವೆ
ದಕ್ಷಿಣ ಕರ್ನಾಟಕದಲ್ಲಿ ಮೊದಲ "ನವ ತಲೆಮಾರಿನ ಅಂಚೆ ಕಚೇರಿ' ತುಮಕೂರಿನಲ್ಲಿ ಆರಂಭವಾಗಿದೆ. ಸುಧಾರಿತ ಮೌಲಸೌಕರ್ಯ, ಡಿಜಿಟಲ್​ ಸೇವೆ ಒಳಗೊಂಡಿದೆ, ವಿದ್ಯಾರ್ಥಿಗಳು, ಗ್ರಾಹಕರು ಇದರ ಸೌಲಭ್ಯವನ್ನು ಪಡೆಯಬಹುದು.
ಬಿ.ಎಂ.ಶಂಕರಪ್ಪ
ಅಂಚೆ ಅಧೀಕ್ಷಕ, ತುಮಕೂರು ವಿಭಾಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net