ಉದ್ಯೋಗ,ಭ್ರಷ್ಟಾಚಾರ, ದಲಿತರ ಹಣ ಬಳಕೆ, ಯುವ ಸಮೂಹಕ್ಕೆ ದ್ರೋಹ ಬಗೆಯುವ ಕೆಲಸ ಕಾಂಗ್ರೆಸ್ ಮಾಡಿದೆ. ಗೃಹಲಕ್ಷಿ$್ಮಯರ 5 ಸಾವಿರ ಕೋಟಿ ಎಲ್ಲಿ ಹೋಗಿದೆ ಅಂತಾ ಇವತ್ತು ಕೂಡ ಗೊತ್ತಿಲ್ಲ. ಕಾಂಗ್ರೆಸ್ಸಿಗರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಬರದ ವಿಚಾರದಲ್ಲಿ ಸರ್ಕಾರದ ಸಂಪೂರ್ಣ ವೈಲ್ಯ ವಿರುದ್ಧ ಪ್ರತಿಭಟಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಾದಯಾತ್ರೆ ಮೂಲಕ ಮಾಡುತ್ತೀವಿ. ನಮ್ಮ ಹೋರಾಟ ದಲಿತರಿಗೆ ಮೀಸಲಿಟ್ಟ ಹಣವನ್ನು ದುರುಪಯೋಗ ಪಡಿಸಿಕೊಂಡಿರುವರ ವಿರುದ್ಧ. ಇವತ್ತು ಮೊಸಳೆ ಕಣ್ಣೀರಿಡುವ ಕಪಟ ನಾಟಕವನ್ನು ಕಾಂಗ್ರೆಸ್ ಮಾಡುತ್ತಾ ಇದೆ. ರಾಜ್ಯದ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.