ಕಾರುಗಳ ಮುಖಾಮುಖಿ ಡಿಕ್ಕಿ, ನಾಲ್ವರ ದುರ್ಮರಣ

ನಜ್ಜುಗುಜ್ಜಾದ ಕಾರು
ನಜ್ಜುಗುಜ್ಜಾದ ಕಾರು
Published on

ಪ್ರಮುಖ ಮುಖ್ಯಾಂಶಗಳು

  • ಚಿಕ್ಕನಾಯಕನಹಳ್ಳಿ-ಮೈಸೂರು ಹೆದ್ದಾರಿ 150ಎರಲ್ಲಿ ಅಪಘಾತ
  • ತುರುವೇಕೆರೆ ಮೂಲದ ಅಪ್ಪ-ಮಗಳ ಸ್ಥಳದಲ್ಲೇ ಸಾವು
  • ಕೊನೆಯುಸಿರೆಳದ ಸ್ನೇಹಿತರು

ಚಿಕ್ಕನಾಯಕನಹಳ್ಳಿ:- ಕಾರುಗಳ ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಭೀಕರ ಘಟನೆ ಚಿಕ್ಕನಾಯನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಶುಕ್ರವಾರ ರಾತ್ರಿ 8 ಗಂಟೆ ವೇಳೆ ಚಿಕ್ಕನಾಯಕನಹಳ್ಳಿ& ಮೈಸೂರು ಹೆದ್ದಾರಿ 150ಎರಲ್ಲಿನ ತೂಬರೇಹಳ್ಳಿ ಗೇಟ್​ ಬಳಿ ಸಂಭವಿಸಿದ ಕಾರುಗಳ ನಡುವಿನ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ. ಕೆ.ಬಿ.ಕ್ರಾಸ್​ ಕಡೆಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಚಿಕ್ಕನಾಯಕನಹಳ್ಳಿ ಪಟ್ಟಣದ ವಿವೇಕ್​ (31), ಅನಿಲ್​ (32) ಹಾಗೂ ತಾತಯ್ಯ ಗೋರಿಗೆ ಭೇಟಿ ನೀಡಿ ತುರುವೇಕೆರೆಗೆ ತೆರಳುತ್ತಿದ್ದ ಕಾರಿನಲ್ಲಿದ್ದ ದಾವುದ್​ ಪಾಷ (45), ಆನಮ್​ (3) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕನಾಯಕನಹಳ್ಳಿಯ ಅನಿಲ್​, ತುರುವೇಕೆರೆಯ ಯಾಸಿನ್​ ತಾಜ್​, ಸೀಮಾ ಹಾಗೂ ಆಸ್ಮಾ ತೀವ್ರವಾಗಿ ಗಾಯಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹಗಳನ್ನು ಪಟ್ಟಣದ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್​ ಅಧೀಕ್ಷಕರ ಗೋಪಾಲ್​, ಶಾಸಕ ಸಿ.ಬಿ.ಸುರೇಶ್​ ಬಾಬು, ತಹಸೀಲ್ದಾರ್​ ಮಮತಾ ಸ್ಥಳಕ್ಕೆ ಭೇಟಿ ನೀಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net