ಕೊಲೆ ಪ್ರಕರಣ ದಾಖಲಾದ 12 ಗಂಟೆಯ ಒಳಗಾಗಿ ಪ್ರಕರಣದ ಪ್ರಮುಖ ಸೂತ್ರಧಾರಿ ನಿದ್ರಗಟ್ಟದ ಹನುಮಂತರಾಜು ಹಾಗೂ ಬೆಂಗಳೂರಿನ ಲಕ್ಷಿ$್ಮಕಾಂತ (31), ಊರ್ಡಿಗೆರೆ ಹೋಬಳಿ ಮಾಚನಹಳ್ಳಿ ನವೀನ್ ಕುಮಾರ್ (28) ಹಾಗೂ ಕೊರಟಗೆರೆ ತಾಲೂಕಿನ ರೌರಗಾನಹಳ್ಳಿಯ ಎಂ.ಡಿ.ಜಿಲಾನ್ (21)ರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಟನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.