Felicitation in hometown: An inspiration for achievement.
Published on:
Copied
Follow Us
ತುರುವೇಕೆರೆ: ಸ್ವಗ್ರಾಮದಲ್ಲಿ ಸಾಧನೆ ಮಾಡಿದವರನ್ನು ಆತ್ಮೀಯತೆಯಿಂದ ಅಭಿನಂದಿಸಿದರೆ ಮುಂದೊಂದು ದಿನ ಮತ್ತಷ್ಟು ಸಾಧಕರನ್ನು ಹೊರತರಲು ಸಹಾಯವಾಗುತ್ತದೆ ಎಂದು ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದರು.
ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ನಲ್ಲಿ ಎರಡು ಚಿನ್ನದ ಪದಕಗಳಿಸಿದ ತಾಲೂಕಿನ
ಡಾ.ಕವನಾ ಅವರನ್ನು ಬೇಚಿನಹಳ್ಳಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಹೂಟ್ಟೂರಿನಲ್ಲಿ ಮಾಡಿದ ಸನ್ಮಾನ ಮುಖ್ಯಮಂತ್ರಿಗಳಿಂದ ಪಡೆದ ಸನ್ಮಾನಕ್ಕೆ ಸಮ. ಪಾಲಕರ ಮಾರ್ಗದರ್ಶನ ಹಾಗೂ ಶಿಕ್ಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎಂದರು.
ನಿವೃತ್ತ ಉಪನ್ಯಾಸಕ ಎನ್.ಪಿ.ನಾಗರಾಜ್, ಶರಣ ಸಾಹಿತ್ಯ ವೇದಿಕೆಯ ದಿಬ್ಬದಹಳ್ಳಿ ಶ್ಯಾಮಸುಂದರ್ ನಿವೃತ್ತ ಶಿಕ್ಷಕ ಹಬುಕನಹಳ್ಳಿ ಶಿವಣ್ಣ, ಮಂಜುನಾಥ್, ಮೋಹನ್, ಗೋಪಾಲ್ ಇತರರು ಇದ್ದರು.