ಹೋಬಳಿಯಲ್ಲಿ ಕಳೆದ ಸ್ವಲ್ಪ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳನ್ನು ಬಿಟ್ಟು ರೈತರು ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಮುಂದೆ ಕಾಯುವಂತಾಗಿದೆ. ಹೂಯಿಲ್ ದೊರೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಕಂಬದಹಳ್ಳಿ, ಉದ್ದನಚಿಕ್ಕನಹಟ್ಟಿ, ಹೂಯಿಲ್ ದೊರೆ, ರಂಗನಹಳ್ಳಿ, ಚಿಕ್ಕಸಂದ್ರ ಕಾವಲ್, ಸಾದೇಕರೆನಹಳ್ಳಿ ಗ್ರಾಮಗಳ ಬಿಪಿಎಲ್ ಕಾರ್ಡುದಾರರಿಗೆ ಪಡಿತರ ನೀಡುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ದಿನಗಟ್ಟಲೆ ಕಾದರೂ ಪಡಿತರ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.