ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಂದ್ರೆ ಶಿಸ್ತಿನ ಪಕ್ಷ. ಆದರೆ, ರಾಹುಲ್ ಗಾಂಧಿ ಅವರನ್ನೇ ಯಾರು (ವೂ ಇಸ್ ರಾಹುಲ್)ಅಂತ ಕೇಳಿದ್ದ ಸದ್ಗುರು (ಜಗ್ಗಿ ವಾಸುದೇವ್) ಅವರ ಜತೆ ವೇದಿಕೆ ಹಂಚಿಕೊಂಡಿದ್ದು (ಡಿಕೆಶಿ) ಶಿಸ್ತು ಮೀರಿದಂತಲ್ಲವಾ ಎಂದು ಪ್ರಶ್ನಿಸುವ ಮೂಲಕ ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ಟಾಂಗ್ ಕೊಟ್ಟರು.