ಬಿಎಸ್​ವೈ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು...

ತುಮಕೂರಿನ ಎಸ್​ಎಸ್​ಪುರಂ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಿಎಸ್​ವೈ ಹುಟ್ಟುಹಬ್ಬದ ಅಂಗವಾಗಿ  ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ವತಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ಜಿ.ಬಿ.ಜ್ಯೋತಿಗಣೇಶ್​, ಪಿ. ಸದಾಶಿವಯ್ಯ, ಆರ್​.ಜಿ.ಸುರೇಶ್​, ಎನ್​.ಆರ್​. ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್​, ವಿನಯ್​ ಜೈನ್​, ಲೋಕೇಶ್​ ಹೊನ್ನುಡಿಕೆ, ರಾಜಾರಾಮ್​ ಮೆಡಿಕಲ್​ ಮತ್ತಿತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಯಡಿಯೂರಪ್ಪ 84ನೇ ಜನ್ಮದಿನ
  • ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ
  • ಉಮಾಮಹೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ
ತುಮಕೂರು: ರಾಜ್ಯ ಹಿರಿಯ ಬಿಜೆಪಿ ಕಾರ್ಯಕರ್ತರ ವೇದಿಕೆ ಹಾಗೂ ಬಿ.ಎಸ್​.ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ 84ನೇ ಹುಟ್ಟುಹಬ್ಬವನ್ನು ಎಸ್​.ಎಸ್​.ಪುರಂನ ಉಮಾಮಹೇಶ್ವರ ದೇವಾಲಯದ ಬಳಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಬಿಎಸ್​ವೈ ಜನ್ಮದಿನ ಆಚರಣೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಚಾಲನೆ ನೀಡಿದರು.
ವೇದಿಕೆ ಸಂಚಾಲಕ ಸದಾಶಿವಯ್ಯ ಮಾತನಾಡಿ, ಒಂದು ಕಾಲದಲ್ಲಿ ಬಿ.ಎಸ್​.ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತುಗಳು ಕೇಳಿ ಬರುತಿದ್ದವು. ತಮ್ಮನ್ನು ನಂಬಿ ಬಂದವರನ್ನು ಕೈಬಿಡದೆ ರಾಜಕೀಯವಾಗಿ ದಡ ಸೇರಿಸಿದ ವ್ಯಕ್ತಿ ಬಿಎಸ್​ವೈ ಮಾತ್ರ. ಅವರಿಗೆ ದೇವರು ಒಳ್ಳೆಯ ಆರೋಗ್ಯ ನೀಡಿ, ಮತ್ತಷ್ಟು ಮಾರ್ಗದರ್ಶನ ಮಾಡುವ ಹುಮ್ಮಸ್ಸು ನೀಡಲಿ ಎಂದು ಶುಭ ಹಾರೈಸಿದರು.
ಬಿಎಸ್​ವೈ ರಾಜಕೀಯ ಜೀವನದ ಕುರಿತಾದ ಕಿರುಹೊತ್ತಿಗೆಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಪಿ. ಸದಾಶಿವಯ್ಯ, ಆರ್​.ಜಿ.ಸುರೇಶ್​, ಎನ್​.ಆರ್​. ಸ್ವಾಮಿ, ನಂಜುಂಡಯ್ಯ, ಚಂದ್ರಶೇಖರ್​, ವಿನಯ್​ ಜೈನ್​, ಲೋಕೇಶ್​ ಹೊನ್ನುಡಿಕೆ, ರಾಜಾರಾಮ್​ ಮೆಡಿಕಲ್​ ಮತ್ತಿತರರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net