ಬಾಲಕನ ಮೇಲೆ ಹರಿದ ಎಲೆಕ್ಟ್ರಿಕ್ ಕಾರು: ಬಾಲಕ ಸಾವು

ಅಪಘಾತವಾದ ಕಾರು
ಅಪಘಾತವಾದ ಕಾರು
Published on

ಪ್ರಮುಖ ಮುಖ್ಯಾಂಶಗಳು

  • ಸೈಕನ್​ ತಿಳಿಯುತ್ತಿದ್ದ ಬಾಲಕನ ಮೇಲೆ ಹರಿದ ಕಾರು
  • ರಸ್ತೆ ಬದಿ ಏಕಾಏಕಿ ನುಗ್ಗಿದ ಎಲೆಕ್ಟ್ರಿಕ್​ ಕಾರು
  • ಗುಬ್ಬಿ ತಾಲೂಕು ನಿಟ್ಟೂರಿನಲ್ಲಿ ಘಟನೆ
  • ಗುಬ್ಬಿ ಠಾಣೆಯಲ್ಲಿ ಪ್ರಕರಣ ದಾಖಲು
ತುಮಕೂರು: ಅಂಗಡಿ ಮುಂದಿನ ರಸ್ತೆ ಬದಿಯಲ್ಲಿ ಸೈಕಲ್ ಮೇಲೆ ಕುಳಿತು ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಎಲೆಕ್ಟ್ರಿಕ್ ಕಾರೊಂದು ಹರಿದ ಪರಿಣಾಮ ಮಗು ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಗುಬ್ಬಿ ತಾಲೂಕು ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ರಾಘವೇಂದ್ರ ಟೆಕ್ಸ್ ಟೈಲ್ ಜವಳಿ ಅಂಗಡಿಯ ಮಾಲೀಕ ಮೋಹನ್ ಕುಮಾರ್ ಅವರ ಮಗ ಶೋಭಿತ್ ರಾಘವ್(13) ಅಪಘಾತದಿಂದ ಮೃತಪಟ್ಟ ದುರ್ದೈವಿ.
ನಿಟ್ಟೂರು ಗ್ರಾಮದಲ್ಲಿ ಬಟ್ಟೆ ಅಂಗಡಿ ವ್ಯಾಪಾರ ನಡೆಸಿದ್ದ ಮೊಹನ್ ಕುಮಾರ್ಶಾ ಮಗನನ್ನು ಕೂಡ ಅಂಗಡಿಯ ಬಳಿ ಕರೆದುಕೊಂಡು ಬಂದಿದ್ದರು. ಅಂಗಡಿಯ ಮುಂದೆ ತನ್ನ ಸೈಕಲ್ ನಲ್ಲಿ ಕುಳಿತು ಆಟವಾಡುತ್ತಿದ್ದ ಸಂದರ್ಭದಲ್ಲಿ ಯಮ ಸ್ವರೂಪಿಯಾಗಿ ಬಂದ ಕಾರು ಏಕಾಏಕಿ ಬಾಲಕನ ಮೇಲೆ ಹರಿದಿದೆ.
ತೀವ್ರ ಗಾಯಗೊಂಡ ಬಾಲಕನ ಹೆಚ್ಚಿನ ಚಿಕಿತ್ಸೆಗಾಗಿ ಗುಬ್ಬಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಧಾವಿಸಿದ ಗುಬ್ಬಿ ಪೊಲೀಸರು ಭೇಟಿ ನೀಡಿ ಕಾರಿನ ಚಾಲಕನ ವಿರುದ್ಧ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net