ವೈಯಕ್ತಿಕ ಓಟಗಳು, ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್ ಬಾಲ್ ಸೇರಿದಂತೆ ನಾನಾ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಅವಕಾಶವಿದ್ದು ಒಬ್ಬ ವಿದ್ಯಾರ್ಥಿ ಮೂರು ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರೀಯ ಮಟ್ಟದವರೆಗೂ ಸ್ಫರ್ಧಿಸಲು ಅವಕಾಶವಿದೆ ಆದರೆ, ಶೈಕ್ಷಣಿಕ ಬದುಕಿನಲ್ಲಿ ಮಹತ್ವ ಪಡೆದುಕೊಂಡಿರುವ ಕ್ರೀಡಾಕೂಟಕ್ಕೆ ಸಂಬಂಧಿಸಿದ ಯಾವುದೇ ಸೂಚನೆ ಇಲ್ಲದ ಕಾರಣ ಬಹುತೇಕ ಶಾಲೆಗಳಲ್ಲಿ ನಿತ್ಯ ಅಭ್ಯಾಸ ಕೂಡ ನಡೆಸದೇ ಮಕ್ಕಳಿಗೆ ಪಠ್ಯಕ್ಕೆ ಸೀಮಿತಗೊಳಿಸಲಾಗಿದೆ.