ಎಐ ಬಳಕೆ ಸುರಕ್ಷತೆಗೆ ಒತ್ತು ಇರಲಿ

 ತುಮಕೂರಿನಲ್ಲಿ ಇಜ್ಞಾನ ಟ್ರಸ್ಟ್​ ಹೊರತಂದಿರುವ "ಪುಟ್ಟ ಪುಟ್ಟಿ ಮತ್ತು ಸೈಬರ್​ ಸುರಕ್ಷತೆ' ಕೃತಿಯನ್ನು ಟಿ.ಎಸ್​.ಗೋಪಾಲ್​ ಬಿಡುಗಡೆಗೊಳಿಸಿದರು. ಟಿ.ಜಿ.ಶ್ರೀನಿಧಿ, ಜಿ.ಎಸ್​.ಅರುಣ್​ ಕುಮಾರ್​, ರೂಪಶ್ರೀ ಇದ್ದರು.
ತುಮಕೂರಿನಲ್ಲಿ ಇಜ್ಞಾನ ಟ್ರಸ್ಟ್​ ಹೊರತಂದಿರುವ "ಪುಟ್ಟ ಪುಟ್ಟಿ ಮತ್ತು ಸೈಬರ್​ ಸುರಕ್ಷತೆ' ಕೃತಿಯನ್ನು ಟಿ.ಎಸ್​.ಗೋಪಾಲ್​ ಬಿಡುಗಡೆಗೊಳಿಸಿದರು. ಟಿ.ಜಿ.ಶ್ರೀನಿಧಿ, ಜಿ.ಎಸ್​.ಅರುಣ್​ ಕುಮಾರ್​, ರೂಪಶ್ರೀ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುಟ್ಟಪುಟ್ಟಿ ಮತ್ತು ಸೈಬರ್​ ಸುರಕ್ಷತೆ ಕೃತಿ
  • ಇಜ್ಞಾನ ಟ್ರಸ್ಟ್​ ವತಿಯಿಂದ ಲೋಕಾರ್ಪಣೆ
  • ಲೇಖಕ ಟಿ.ಜಿ.ಶ್ರೀನಿಧಿ

ತುಮಕೂರು: ತಂತ್ರಜ್ಞಾನದ ಹೊಸ ಸವಲತ್ತುಗಳನ್ನು ಬಳಸುವುದರ ಜತೆಗೆ ಜವಾಬ್ದಾರಿಯುತ, ಸುರತವಾಗಿ ಬಳಸುವ ಅರಿವನ್ನು ಹೊಂದಿರಬೇಕು ಎಂದು ಲೇಖಕ ಟಿ.ಜಿ.ಶ್ರೀನಿಧಿ ಹೇಳಿದರು.

ನಗರದ ಅಂಕಿತ ಶಾಲೆಯಲ್ಲಿ ಶನಿವಾರ ಇಜ್ಞಾನ ಟ್ರಸ್ಟ್​ ಹೊರತಂದಿರುವ "ಪುಟ್ಟ ಪುಟ್ಟಿ ಮತ್ತು ಸೈಬರ್​ ಸುರಕ್ಷತೆ' ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ-ತಂತ್ರಜ್ಞಾನ ಜಗತ್ತಿನ ಹೊಸ ಬೆಳವಣಿಗೆಗಳ ಬಗ್ಗೆ ನಮ್ಮ ಭಾಷೆಯಲ್ಲೇ ಮಾಹಿತಿ ಸಿಗುವಂತೆ ಆಗಬೇಕಿರುವುದು ಮುಖ್ಯ. ಈ ನಿಟ್ಟಿನಲ್ಲಿ ಬೆಂಗಳೂರಿನ ಇ ಜ್ಞಾನ ಟ್ರಸ್ಟ್​ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಕೆಲಸಗಳು ಇನ್ನೂ ಹೆಚ್ಚು ಪ್ರಮಾಣದಲ್ಲಿ ನಡೆಯಬೇಕಿದೆ ಎಂದರು.
ವಿಜ್ಞಾನ-ತಂತ್ರಜ್ಞಾನ ವಿಷಯಗಳನ್ನು ಕತೆಗಳ ರೂಪದಲ್ಲಿ, ಆಕರ್ಷಕ ಚಿತ್ರಗಳೊಡನೆ ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ ಇಜ್ಞಾನ ಟ್ರಸ್ಟ್​ ಸಂಸ್ಥೆ ಹೊರತಂದಿರುವ 'ಪುಟ್ಟಪುಟ್ಟಿ ಮತ್ತು ಸೈಬರ್​ ಸುರಕ್ಷತೆ' ಕೃತಿಯು ವಯಸ್ಸಿನ ಭೇದಭಾವವಿಲ್ಲದೆ ಡಿಜಿಟಲ್​ ಸಾಧನಗಳನ್ನು ಎಲ್ಲೆಲ್ಲೂ ವ್ಯಾಪಕವಾಗಿ ಬಳಸುತ್ತಿರುವ ಈ ಸಂದರ್ಭದಲ್ಲಿ, ಅವುಗಳನ್ನು ಸುರಕ್ಷಿತವಾಗಿ ಬಳಸುವುದರ ಬಗ್ಗೆ ಮಾಹಿತಿ ನೀಡುವ ವಿಷಯ ಹೊಂದಿದೆ ಎಂದು ತಿಳಿಸಿದರು.
ಅಮೆರಿಕಾದಿಂದ ಅಂತರ್ಜಾಲ ಮೂಲಕ ಆಶಯ ಭಾಷಣಮಾಡಿದ ಅರುಣ್​ ಕುಮಾರ್​, ಪ್ರಯತ್ನ ಮತ್ತು ಆತ್ಮವಿಶ್ವಾಸಗಳ ಸಂಗಮವೇ ಯಶಸ್ಸು. ಇ ಜ್ಞಾನ ಟ್ರಸ್ಟ್​ ಸಂಸ್ಥಾಪಕರಲ್ಲೊಬ್ಬರಾಗಿದ್ದ ಬಿ. ಎಸ್​.ವಿಶ್ವನಾಥ್​ ಸಣ್ಣ ಹಳ್ಳಿಯೊಂದರಲ್ಲಿ ಬೆಳೆದರು ತಮ್ಮ ಪ್ರಯತ್ನದಿಂದಾಗಿ ಬಿಎಚ್​ಇಎಲ್​ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನಕ್ಕೆ ಏರಿದ್ದರು. ಅಂತಹ ಸಾಧಕರ ಜೀವನ ನಮಗೆ ಆದರ್ಶವಾಗಬೇಕಿದೆ ಎಂದು ತಿಳಿಸಿದರು.
ಸೈಬರ್​ ಸುರಕ್ಷತೆ ಕುರಿತ "ಪುಟ್ಟ ಪುಟ್ಟಿ ಮತ್ತು ಸೈಬರ್​ ಸುರಕ್ಷತೆ' ಪುಸ್ತಕದ ಪ್ರತಿಗಳನ್ನು ಅಂಕಿತ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಮಕ್ಕಳದೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
ಇಜ್ಞಾನ ಟ್ರಸ್ಟ್​ ಅಧ್ಯಕ್ಷ ಟಿ. ಎಸ್​.ಗೋಪಾಲ್​, ಅಂಕಿತ ಶಾಲೆಯ ಜಿ.ಎಸ್​.ಅರುಣ್​ಕುಮಾರ್​, ಜಿ. ಎಸ್​.ಅಭಿಷೇಕ್​, ರೂಪಶ್ರೀ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net