ಮಾದಕ ವ್ಯಸನ ಯುವಜನಾಂಗಕ್ಕೆ ಮಾರಕ

ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಪೋಲೀಸ್​ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು  ಕಳ್ಳ ಸಾಗಣೆ ವಿರೋಧಿ ದಿನ-ವನ್ನು ಕೆ.ವಿ.ಅಶೋಕ್​, ಎನ್​.ಬಿ.ಪ್ರದಿಪ್​ ಕುಮಾರ್​ ಉದ್ಘಾಟಿಸಿದರು. ಪುರುಷೋತ್ತಮ್​, ಚೇತನ್​ ಕುಮಾರ್​, ಡಾ.ಅರುಣಾ, ಎಸ್​.ಆರ್​.ಸಿದ್ದೇಶ್ವರ ಸ್ವಾಮಿ, ಡಿ.ಕೆ.ಸುಬ್ರಹ್ಮಣ್ಯ ಇದ್ದರು.
ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಪೋಲೀಸ್​ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ-ವನ್ನು ಕೆ.ವಿ.ಅಶೋಕ್​, ಎನ್​.ಬಿ.ಪ್ರದಿಪ್​ ಕುಮಾರ್​ ಉದ್ಘಾಟಿಸಿದರು. ಪುರುಷೋತ್ತಮ್​, ಚೇತನ್​ ಕುಮಾರ್​, ಡಾ.ಅರುಣಾ, ಎಸ್​.ಆರ್​.ಸಿದ್ದೇಶ್ವರ ಸ್ವಾಮಿ, ಡಿ.ಕೆ.ಸುಬ್ರಹ್ಮಣ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡ್ರಗ್ಸ್​ ನಿಯಂತ್ರಣಕ್ಕೆ ಬಲಿಷ್ಠ ಕಾನೂನು
  • ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ
  • ಜಿಲ್ಲಾಡಳಿತ, ಪೋಲೀಸ್​ ಇಲಾಖೆ ಆಂದೋಲನ
ತುಮಕೂರು: ನಮ್ಮ ದೇಶದಲ್ಲಿ ಬೇರೆಲ್ಲಾ ಕಾನೂನುಗಳಿಗಿಂತಲು ಮಾದಕ ವಸ್ತುಗಳ ಮೇಲಿನ ಕಾನೂನು ಬಲಿಷ್ಠವಾಗಿದೆ. ಅದನ್ನು ಸೂಕ್ತವಾಗಿ ಪಾಲಿಸುವ ಮೂಲಕ ಮಾದಕ ವಸ್ತುಗಳ ವ್ಯಸನ ಯುವ ಜನಾಂಗವನ್ನು ಕಾಡದಂತೆ ಎಚ್ಚರವಹಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಪೋಲೀಸ್​ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವ್ಯಸನ ಮತ್ತು ಕಳ್ಳ ಸಾಗಣೆ ವಿರೋಧಿ ದಿನ- 2026 ರನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆಯಲ್ಲಿ ಮಾದಕವಸ್ತುಗಳ ವಿರುದ್ಧ ಜಾಗೃತಿಯನ್ನು ನೀಡುತ್ತೇವೆ. ಯಾವುದೋ ಆಮಿಷಕ್ಕೆ ಒಳಗಾಗಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳದಂತೆ ಎಚ್ಚರ ವಹಿಸುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರವು ಬೃಹತ್​ ಆಂದೋಲನವನ್ನು ಕೈಗೊಂಡಿರುವುದು ಸ್ವಾಗತಾರ್ಹ ಎಂದರು.
ಮಾದಕವಸ್ತುಗಳನ್ನು ಬೇಡ ಎನ್ನುವ ಧೈರ್ಯ ವಿದ್ಯಾರ್ಥಿಗಳಲ್ಲಿ ಇರಬೇಕು. ಸ್ನೇಹಿತರನ್ನೋ, ಮತ್ಯಾರನ್ನೋ ನೋಡಿ ನಾವು ಅದರ ಅಮಲಿಗೆ ಬಿದ್ದರೆ ಬದುಕು ಸರ್ವನಾಶವಾಗುತ್ತದೆ. ಡ್ರಗ್ಸ್​ ಜಾಲವನ್ನು ತಡೆಯಲು ಸರ್ಕಾರ, ಪೋಲೀಸ್​ ಇಲಾಖೆ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಇಂತಹ ಜಾಲಗಳ ಬಗ್ಗೆ ಯಾರಾದರೂ ಮಾತನಾಡುವುದು ತಿಳಿದರೆ ಇಲಾಖೆಗೆ ತಿಳಿಸಬೇಕು. ಮಾಹಿತಿ ಕೊಟ್ಟರೆ ಹೆಸರು, ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಎಎಸ್ಪಿ ಪುರುಷೋತ್ತಮ್​ ತಿಳಿಸಿದರು.
ಜಿಲ್ಲಾ ಪೊಲೀಸ್​ ಅಧೀಕ್ಷಕ ಕೆ.ವಿ.ಅಶೋಕ್​, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಯೆರ್ ಡಾ.ಅರುಣಾ, ವಿದ್ಯಾನಿಧಿ ಪ್ರಾಂಶುಪಾಲ ಎಸ್​.ಆರ್​.ಸಿದ್ದೇಶ್ವರ ಸ್ವಾಮಿ, ಡಿ.ಕೆ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಶ್ರೀಗೌರಿ ಪ್ರಾರ್ಥಿಸಿದರು. ಸುನಿಲ್​ ಸ್ವಾಗತಿಸಿದರು. ಡಾ. ಆರತಿ ಪಟ್ರಮೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net