ಜಿಲ್ಲೆಯಲ್ಲೆಡೆ ಕುಡಿಯುವ ನೀರಿಗೆ ತಾತ್ವರ

ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ
ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ
Published on

ಪ್ರಮುಖ ಮುಖ್ಯಾಂಶಗಳು

  • 109 ಗ್ರಾಮಗಳಲ್ಲಿ ಸಮಸ್ಯೆ ತೀವ್ರ
  • ಜವಬ್ಧಾರಿ ಮೆರೆತ ಜಿಲ್ಲಾಡಳಿತ
  • ಜನಪ್ರತಿನಿಧಿಗಳಿಲ್ಲದೆ ಜನರು ಹೈರಾಣ
ತುಮಕೂರು: ಪೂರ್ವ ಮುಂಗಾರು ವಿಳಂಬವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತಾತ್ವರ ಎದುರಾಗಿದೆ. ಈಗಾಗಲೇ 109 ಗ್ರಾಮಗಳಲ್ಲಿ ಸಮಸ್ಯೆ ತೀವ್ರವಾಗಿದ್ದು ಟ್ಯಾಂಕರ್​ ಹಾಗೂ ಖಾಸಗಿ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ. 300ಕ್ಕೂ ಹೆಚ್ಚು ಗ್ರಾಮಗಳಲ್ಲಿ ಜನರು ನೀರಿಗೆ ಪರದಾಡುವ ಸ್ಥತಿಯಿದೆ.
ಆದರೆ, ಜಿಲ್ಲೆಯಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಸಕಾಲಕ್ಕೆ ನೀರು ಸಿಗದಿರುವುದು ಜನರ ಗೋಳು ಹೆಚ್ಚಿಸಿದ್ದು ಸ್ಥಳಿಯ ಆಡಳಿತದಲ್ಲಿ ಜನಪ್ರತಿನಿಧಿಗಳೂ ಇಲ್ಲದೆ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಮುಂದಿನ ಒಂದು ತಿಂಗಳಲ್ಲಿ 187 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ ಎನ್ನಲಾಗಿದ್ದು ಜನರಿಗೆ ಕುಡಿಯುವ ನೀರು ಪೂರೈಸಲು ಜಿಲ್ಲೆಯಲ್ಲಿ 5.73ಕೋಟಿ ರೂ. ಅನುದಾನದ ತುರ್ತು ಅಗತ್ಯವಿದೆ.
ಜಿಲ್ಲಾಡಳಿತ ವಿವಿಧ ಇವೆಂಟ್​ಗಳಲ್ಲಿ ಬ್ಯಸಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ಸಮಸ್ಯೆ ಕೇಳುವವರೇ ಇಲ್ಲದಂತಾಗಿದೆ, ಕೊಳವೆಬಾವಿ ಅಗತ್ಯವಾಗಿರುವ ಕಡೆಗಳಲ್ಲಿ ತುರ್ತು ಕ್ರಮಕೈಗೊಳ್ಳುವುದು ತಡವಾಗಿರುವುದು ಜನರ ಗೋಳು ಹೆಚ್ಚಿಸಿದೆ. ಪಾವಗಡ ತಾಲೂಕಿನಲ್ಲಿ ಭದ್ರ ನೀರು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.
ಚಿಕ್ಕನಾಯಕನಹಳ್ಳಿ ತಾಲೂಕು 6 ಗ್ರಾಪಂಗಳ 147 ಜನವಸತಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ತಿಪಟೂರು ತಾಲೂಕಿನ 398 ಜನವಸತಿ ಪ್ರದೇಶಗಳು ಮತ್ತು ತುರುವೇಕೆರೆ ತಾಲೂಕಿನ 5 ಜನವಸತಿ ಪ್ರದೇಶಗಳಿಗೆ ಜಲ್​ ಜೀವನ್​ ಮಿಷನ್​ ಅಡಿಯಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಬಹುಗ್ರಾಮ ನೀರು ಸರಬರಾಜು ಯೋಜನೆ ಕಾಮಗಾರಿ ಇನ್ನೂ ಕುಂಟುತ್ತ ಸಾಗಿದೆ.
2025&26ರಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಕೈಗೊಂಡಿದ್ದ 72 ಕಾಮಗಾರಿಗಳ ಪೈಕಿ 63 ಮಾತ್ರ ಪೂರ್ಣವಾಗಿದ್ದು 9 ಕಾಮಗಾರಿಗಳು ಕುಂಟುತ್ತಿವೆ. ಕಳೆದ ಮೂರು ವರ್ಷದಲ್ಲಿ ಕೈಗೆತ್ತಿಕೊಂಡಿದ್ದ 8.09ಕೋಟಿ ರೂ. ಕಾಮಗಾರಿಗಳ ಪೈಕಿ ಈವರೆಗೂ 4.08ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದ್ದು ಮೀಸಲಿಟ್ಟಿರುವ ಅನುದಾನ ಬಳಕೆಗೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ತಾಲೂಕು ಸಮಸ್ಯಾತ್ಮಕ ಗ್ರಾಮಗಳು ಅಂದಾಜು ಮೊತ್ತ
ಚಿ.ನಾ.ಹಳ್ಳಿ 13 40.30
ಗುಬ್ಬಿ 04 12.40
ಕೊರಟಗೆರೆ 24 74.40
ಕುಣಿಗಲ್​ 29 86.80
ಮಧುಗಿರಿ 16 49.60
ಪಾವಗಡ 24 74.40
ಶಿರಾ 27 83.70
ತಿಪಟೂರು 16 43.40
ತುಮಕೂರು 16 49.60
ತುರುವೇಕೆರೆ 20 58.90
ಒಟ್ಟು 187 573.50
ಶುದ್ಧ ಕುಡಿಯುವ ನೀರಿನ ಟಕಗಳ ಸ್ಥಿತಿಗತಿ
ತಾಲೂಕು ಒಟ್ಟು ಶುದ್ಧನಿರಿನ ಟಕ ದುಸ್ಥಿತಿ ಟಕಗಳು
ಚಿ.ನಾ.ಹಳ್ಳಿ 165 04
ಗುಬ್ಬಿ 162 11
ಕೊರಟಗೆರೆ 187 32
ಕುಣಿಗಲ್​ 117 04
ಮಧುಗಿರಿ 256 23
ಪಾವಗಡ 286 20
ಶಿರಾ 246 36
ತಿಪಟೂರು 112 18
ತುಮಕೂರು 204 17
ತುರುವೇಕೆರೆ 106 16
ಒಟ್ಟು 1856 181
ಕುಡಿಯುವ ನೀರಿಗೆ ತೀವ್ರ ಸಮಸ್ಯಾತ್ಮಕ ಗ್ರಾಮಗಳು...
ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳ್ಳಾರ, ಲಕ್ಕೇನಹಳ್ಳಿ, ಬಾಲದೇವರಹಟ್ಟಿ, ಗಂಗನಾಯ್ಕನಹಳ್ಳಿ, ಗೆಂಡಬಾಲಯ್ಯನಹಟ್ಟಿ, ಬರಕನಾಳು, ಕರಡಿಸಾಬರಪಾಳ್ಯ, ಕೆಂಕೆರೆ ನವಗ್ರಾಮ, ಬಡಕೆಗುಡ್ಲುಭೋವಿ ಕಾಲೋನಿ, ಕಾತ್ರಿಕೆಹಾಳ್​, ದೊಡ್ಡರಾಂಪುರ, ಬಲ್ಲೇನಹಳ್ಳಿ ಕಾಲೋನಿ, ತರಬೇನಹಳ್ಳಿ ಭೋವಿಕಾಲೋನಿ, ಸಿದ್ದನಕಟ್ಟೆ, ಹೊಸಹಳ್ಳಿ, ರಾಮನಹಳ್ಳಿ, ಹನುಮಂತನಹಳ್ಳಿ, ಕಲ್ಲೇನಹಳ್ಳಿ.
ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಗೊಲ್ಲರಹಟ್ಟಿ, ಆಲದಮರದಹಟ್ಟಿ, ನೀಲಗೊಂಡನಹಳ್ಳಿ, ಡಿ.ನಾಗೇನಹಳ್ಳಿ, ಕುಣಿಗಲ್​ ತಾಲೂಕಿನ ಅರೆಪಾಳ್ಯ, ಚಿಕ್ಕಹನುಮೇಗೌಡನಪಾಳ್ಯ, ತೊರೆಹಳ್ಳಿ ಪಾಳ್ಯ, ಆಶ್ರಯಕಾಲೋನಿ, ಜನತಾ ಕಾಲೋನಿ, ದೊಡ್ಡಮಳವಾಡಿ, ಭಕ್ತರಹಳ್ಳಿ, ಮುದಿಗೆರೆಪಾಳ್ಯ, ಮೇಗಲಪಾಳ್ಯ, ಹೊನ್ನೇಗೌಡನಪಾಳ್ಯ, ತಾವರೆಕೆರೆ, ಕುಳ್ಳಿನಂಜಯ್ಯನಪಾಳ್ಯ, ರಾಯಗೋನಹಳ್ಳಿ, ಕೆಂಚಯ್ಯನದೊಡ್ಡಿ, ಬಿಳಿದೇವಾಲಯ, ನಾಗನಹಳ್ಳಿ, ಹನುಮಾಪುರ, ಮಾದಗೋನಹಳ್ಳಿ, ಕೆಂಪಸಾಗರ, ಮಂದನಪಾಳ್ಯ, ಕೊಪ್ಪಲುಬಾರೆ, ಕಾಮನಹಳ್ಳಿ, ಕನ್ನಗುಣಿ ಗೊಲ್ಲರಹಟ್ಟಿ, ಮೊದುರು, ಬನ್ನಿಮರದಕಟ್ಟೆ.
ಮಧುಗಿರಿ ತಾಲೂಕಿನ ಗೋವಿಂದನಹಳ್ಳಿ, ಕಳ್ಳಿಪಾಳ್ಯ, ವಡೇರಹಳ್ಳಿ, ಬಂಡೇನಹಳ್ಳಿ, ಶಿರಾ ತಾಲೂಕಿನ ಗೌಡಗೆರೆ, ಲಕ್ಷಿ$್ಮಸಾಗರ, ದ್ವಾರಾಳು, ಮಂಗನಹಳ್ಳಿ, ದೊಡ್ಡಲದಮಡು ತಾಂಡ, ಗಿಡ್ಡನಹಳ್ಳಿ, ಗಜಮಾರನಹಳ್ಳಿ, ಮೊಸರಕುಂಟೆ, ಪುರಲೇಹಳ್ಳಿ, ದಾಸರಹಳ್ಳಿ, ನಿಡಗಟ್ಟೆ, ಮಾಗೋಡು, ರಾಮನಹಳ್ಳಿ, ಅರೇಹಳ್ಳಿ, ಕೊಸುಕುಂಟೆ, ಮೇಲ್ಕುಂಟೆ, ಮಾನಂಗಿ ಮತ್ತು ಅಜ್ಜಯ್ಯನಹಳ್ಳಿ, ಕೆ.ರಂಗನಹಳ್ಳಿ, ಕೆ.ರಂಗನಹಳ್ಳಿ, ಕರೇಜವನಹಳ್ಳಿ, ಗೋಮಾರದನಹಳ್ಳಿ.
ಶಿರಾ ಶಿಡ್ಲೇಹಳ್ಳಿ, ಶೆಟ್ಟಿಹಳ್ಳಿ, ನ್ಯಾಕೇನಹಳ್ಳಿ, ಚೌಡ್ಲಾಪುರ, ಪುಟ್ಟರಂಗನನಾಯಕನಪಾಳ್ಯ, ಶಾಂತಿನಿವಾಸ ಎಸ್ಟೇಟ್​, ತುಮಕೂರು ತಾಲೂಕಿನ ಸಿದ್ದನಪಾಳ್ಯ,
ದೊಡ್ಡಗುಣಿ, ಸಂಗಲಾಪುರ, ಬನ್ನಿಕುಪ್ಪೆ, ಮರಿಚಿಕ್ಕಯನಪಾಳ್ಯ, ಮೇಣಸಂದ್ರ, ಗಳಿಗೇನಹಳ್ಳಿ, ಮೈಲನಹಳ್ಳಿ, ಭೋವಿಪಾಳ್ಯ, ಅಮೃತಗಿರಿ, ತುರುವೇಕೆರೆ ತಾಲೂಕಿನ ನೇರಳಕಟ್ಟೆ ಗೊಲ್ಲರಹಟ್ಟಿ, ಮೇಲಿನವಳಗೇರಗಳ್ಳಿ ಜೆ.ಸಿ.ನಗರ, ದೊಡ್ಡಬಿರನಹಳ್ಳಿ, ಚಿಕ್ಕತುರುವೇಕೆರೆ, ಮಂಗಿಕುಪ್ಪೆ, ಅಜ್ಜೇನಹಳ್ಳಿ, ಮಗಳೂರು ಗೊಲ್ಲರಹಟ್ಟಿ, ಕೆ.ದೊಡ್ಡೇರಿ, ಹೆಗ್ಗೆರೆ, ಎ.ಹೊಸಹಳ್ಳಿ, ಚಿಕ್ಕೋನಹಳ್ಳಿ, ಡೊಂಕಿಹಳ್ಳಿ, ಜೋಗರಪಾಳ್ಯ, ಸುರಂಗನಗರ, ಮಾಯಸಂದ್ರ ದೊಡ್ಡಶೆಟ್ಟಿಕೆರೆ, ಆನೆಕೆರೆಪಾಳ್ಯ, ರಾಮಸಾಗರ, ರಂಗನಹಳ್ಳಿ, ಬಿ.ಪುರ ಗ್ರಾಮಗಳಲ್ಲಿ ನೀರಿಗೆ ತಾತ್ವರ ಉಂಟಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net