ಅಲಗುವೀರ ರೇವಣ್ಣಗೆ ಜಾನಪದ ಗೌರವ

ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಅಲಗುವೀರ ರೇವಣ್ಣ
ಡಾ.ಚಿಕ್ಕಣ್ಣ ಯಣ್ಣೆಕಟ್ಟೆ, ಅಲಗುವೀರ ರೇವಣ್ಣ
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಚಿಕ್ಕಣ್ಣ ಯಣ್ಣೆಕಟ್ಟೆಗೆ ತಜ್ಞ ಪ್ರಶಸ್ತಿ
  • ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
  • ಜಿಲ್ಲೆಯ ಇಬ್ಬರು ಭಾಜನ
ತುಮಕೂರು: ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ ಜಾನಪದ ತಜ್ಞ ಪ್ರಶಸ್ತಿಗೆ ಜಾನಪದ ವಿದ್ವಾಂಸ, ಸಂಸತಿ ಚಿಂತಕ ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಜನಪದ ಕಲಾವಿದ ರೇವಣ್ಣ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಗುಬ್ಬಿ ತಾಲೂಕು ಚೇಳೂರು ಸಮೀಪದ ಯಣ್ಣೆಕಟ್ಟೆಯ ಡಾ.ಚಿಕ್ಕಣ್ಣ ಜಾನಪದ ಗಾರುಡಿಗ ಎನಿಸಿದ್ದಾರೆ. ಕನ್ನಡ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಜಾನಪದ, ಚರಿತ್ರೆ, ನಾಟಕ, ಸಂಶೋಧನೆ ಹಾಗೂ ವಿಮರ್ಶಾ ಕ್ಷೇತ್ರಗಳಲ್ಲಿ 83 ಕೃತಿಗಳನ್ನು ಪ್ರಕಟಿಸುವ ಮೂಲಕ ಸಂಪೂರ್ಣವಾಗಿ ಜಾನಪದ ಕ್ಷೇತ್ರದ ಅಧ್ಯಯನಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ಬಂಡಿ ಬಂದಾವು ಬಾಳೆ ವನದಾಗೆ ಕೃತಿಗೆ ಜಾನಪದ ಅಕಾಡೆಮಿ, ಶ್ರೇಷ್ಠ ಪುಸ್ತಕ ಪ್ರಶಸ್ತಿ, ಹೊಳೆದಂಡೆ ಕರಿಕೆಗೆ ಗೊರೂರು ಪ್ರಶಸ್ತಿಗೆ ಭಾಜನರಾಗಿರುವ ಚಿಕ್ಕಣ್ಣ ಅವರು ಶಿರಾ ಸೀಮೆಯ ಜಾನಪದೀಯ ಅಧ್ಯಯನ, ಮೂಡಲಪಾಯ ಯಕ್ಷಗಾನ ಒಂದು ಅಧ್ಯಯನ ವಿಷಯವಾಗಿ ಸಂಶೋಧನೆ ನಡೆಸಿದ್ದಾರೆ.
ಇನ್ನೂ ಚಿತ್ರದೇವರ ಕಾವ್ಯ, ಕಂಬದರಂಗನ ಕಾವ್ಯ ಹೀಗೆ 83ಕ್ಕು ಹೆಚ್ಚು ಕೃತಿಗಳನ್ನು ಪ್ರಕಟಿಸುವ ಮೂಲಕ ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೇಟೆ ನಾಟಕಕ್ಕೆ ಉತ್ತಮ ನಾಟಕ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ರಾಜ್ಯ ಸರ್ಕಾರದ ಸವೋರ್ತ್ತಮ ಸೇವಾ ಪುರಸ್ಕಾರ ಇದಲ್ಲದೆ 2001ರಲ್ಲಿ ಭಾರತ ಜನಗಣನೆ ಅತ್ಯುತ್ತಮ ಸಂಯೋಜಕರಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಗೌರವಕ್ಕೆ ಪಾತ್ರರಾಗಿದ್ದರು.
ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ., ಪದವಿ, ಮೈಸೂರು ವಿವಿಯಲ್ಲಿ ಎಂ.ಎ., ಪದವಿ ಪಡೆದು 1994ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿ.ಎಚ್​.ಡಿ., ಪದವಿ ಪಡೆದು 1988ರಲ್ಲಿ ಎಸ್​ಜೆಆರ್​ ಮಹಿಳಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಆರಂಭಿವಿಸಿ ಚಿಕ್ಕಣ್ಣ ಸಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದು ಜಾನಪದ ಕ್ಷೇತ್ರದ ಅಧ್ಯಯನಕ್ಕೆ ಬದುಕು ಮೀಸಲಿಟ್ಟಿದ್ದಾರೆ. ಜಾನಪದ ತಜ್ಞ ಪ್ರಶಸ್ತಿಯು 50 ಸಾವಿರ ನಗದು, ಸ್ಮರಣಿಕೆ ಹೊಂದಿದೆ.
ಅಲಗುವೀರ "ರೇವಣ್ಣ': ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿರುವ ಚಿಕ್ಕನಾಯನಕಹಳ್ಳಿ ತಾಲೂಕು ಸಾಸಲು ಗೊಲ್ಲರಹಟ್ಟಿಯ ರೇವಣ್ಣ ಕಾಡುಗೊಲ್ಲ ಬುಡಕಟ್ಟು ಸಮುದಾಯದ "ಅಲಗು ಕುಣಿತ' ಮರೆಯಾಗುತ್ತಿರುವ ಜನಪದ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಡುಗೊಲ್ಲ ಸಮುದಾಯದ
ಧಾರ್ಮಿಕ, ಜನಪದ ನಂಬಿಕೆಗಳು ಮತ್ತು ವೀರ ಸಂಸತಿಗಳು, "ಅಲಗುವೀರರು ಹಾಗೂ ಅಲಗು ಕುಣಿತ' ಎಂಬ ಸಾಂಸತಿಕ ಪರಿಕಲ್ಪನೆಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತವೆ.
ಅಲಗುವೀರರ ಆರಾಧನೆ ಕಾಡುಗೊಲ್ಲರ ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ತುಮಕೂರು ಜಿಲ್ಲೆ ಹಾಗೂ ನೆರೆಹೊರೆ ಜಿಲ್ಲೆಗಳಲ್ಲಿ ಅಲಗು ಕುಣಿತ ಪ್ರದರ್ಶನ ನೀಡಿ ಈ ಕಲೆಯನ್ನು ಉಳಿಸುತ್ತಿರುವುದು ವಿಶೇಷ. ವಾರ್ಷಿಕ ಪ್ರಶಸ್ತಿಯು 25 ಸಾವಿರ ನಗದು, ಸ್ಮರಣಿಕೆ ಹೊಂದಿದೆ.
ೋಟೋ:
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net