ವಿದ್ಯುತ್​ ಜಾಲ ಖಾಸಗಿ ಪಾಲು ಮಾಡದಿರಿ

Don't privatize the electricity network.
Don't privatize the electricity network.
Published on
ತಿಪಟೂರು: ನಾವು ಸಿದ್ಧಪಡಿಸಿದ ಊಟ ಸವಿಯಲು ಮುಂದಾಗಿರುವ ಟಾಟಾ ಕಂಪನಿಗೆ ಯಾವುದೇ ಕಾರಣಕ್ಕೂ ವಿದ್ಯುತ್​ ಸರಬರಾಜು ಗುತ್ತಿಗೆ ನೀಡಬಾರದು ಎಂದು ನಗರದ ಬೆಸ್ಕಾಂ ನೌಕರರು ಮತ್ತು ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದರು.
ನಗರದ ಬೆಸ್ಕಾಂ ಕಚೇರಿ ಎದುರು ಅಧಿಕಾರಿಗಳು, ನೌಕರರು ಮತ್ತು ಗುತ್ತಿಗೆದಾರರು ಸೋಮವಾರ ಆಯೋಜಿಸಿದ್ದ ದ್ವಾರಸಭೆಯಲ್ಲಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ಮನೋಹರ್​, ಕಳೆದ 75 ವರ್ಷಗಳಿಂದ ರೈತರು ಮತ್ತು ಜನತೆಯ ಸಹಕಾರದಿಂದ ಕಾಡು, ಮೇಡು ಅಲೆದು, ಕಷ್ಟಪಟ್ಟು ನಾವು ನಿರ್ಮಿಸಿರುವ ವಿದ್ಯುತ್​ ಜಾಲ ಇಡೀ ರಾಜ್ಯದ ಜನತೆಗೆ, ರೈತರಿಗೆ, ಉದ್ಯಮಿಗಳಿಗೆ ಬೆಳಕು ನೀಡುತ್ತಿದೆ. ಇಲ್ಲಿವರೆಗೂ ನಮ್ಮ ಕರ್ತವ್ಯದ ವಿಷಯದಲ್ಲಿ ಸಾರ್ವಜನಿಕರಿಂದ ಯಾವುದೇ ತಕರಾರು ಇಲ್ಲ. ಹಾಗಿದ್ದರೂ, ಯಾರನ್ನೋ ಮೆಚ್ಚಿಸುವ ಭರದಲ್ಲಿ ಟಾಟಾ ಕಂಪನಿಗೆ ವಿದ್ಯುತ್​ ಸರಬರಾಜು ಗುತ್ತಿಗೆ ನೀಡಲು ಮುಂದಾಗಿರುವ ಸರ್ಕಾರದ ನಡೆಯಿಂದ ಬೆಸ್ಕಾಂ ನೌಕರರು, ರೈತರುಮತ್ತು ಗ್ರಾಹಕರಿಗೆ ತೊಂದರೆಯಾಗಲಿದೆ. ನಾವು ಸಿದ್ಧಪಡಿಸಿದ ಊಟವನ್ನು ನಿರಾಯಾಸವಾಗಿ ಟಾಟಾ ಕಂಪನಿಯವರಿಗೆ ಸವಿಯಲು ಕೊಟ್ಟಂತಾಗುತ್ತೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಪ್ರಾಂತ ರೈತ ಸಂದ ಜಿಲ್ಲಾಧ್ಯಕ್ಷ ಆರ್​.ಎಸ್​.ಚನ್ನಬಸವಣ್ಣ ಮಾತನಾಡಿ, ಜಿಲ್ಲೆಯ ರೈತರು ಎಂದಿಗೂ ಬೆಸ್ಕಾಂ ಪರವಾಗಿದ್ದೇವೆ. ಇಲಾಖೆಯಿಂದ ನಮಗೆ ತೊಂದರೆಯಾದರೆ ಜಗಳ ಮಾಡಿಯಾದರೂ ಸರಿ, ನಾವು ಕೆಲಸ ಮಾಡಿಸಿಕೊಳ್ಳುತ್ತೇವೆ. ಆದೇ ಮುಂದಿನ ದಿನಗಳಲ್ಲಿ ಇಲಾಖೆ ಖಾಸಗೀಕರಣಗೊಂಡರೆ ನಮ್ಮ ಕಷ್ಟ ಕೇಳಲು ಯಾರೂ ಇರುವುದಿಲ್ಲ. ಮಿಗಿಲಾಗಿ ಸ್ಮಾರ್ಟ್​ ಮೀಟರ್​ ಅಳವಡಿಸುವುದರಿಂದ "ಐಪಿ' ಸೆಟ್​ಗಳಿಗೂ ವಿದ್ಯುತ್​ ಶುಲ್ಕ ಪಾವತಿಸಬೇಕಾಗುತ್ತೆ ಮತ್ತು ಗೃಹಲಕ್ಷಿ$್ಮ ಯೋಜನೆ ಕೈತಪ್ಪುವ ಅಪಾಯವಿದೆ. ಸಾರ್ವಜನಿಕ ವಿರೋಧ ವ್ಯಕ್ತವಾಗದೇ ಇದ್ದಲ್ಲಿ ಅರ್ಜಿ ಮಾನ್ಯ ಮಾಡಬಹದು ಎಂದು ರಾಜ್ಯ ಸರ್ಕಾರ ಹೇಳಿದ್ದು, ಜೂ.23 ರಂದು ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯ ಇತ್ಯರ್ಥವಾಗಲಿದೆ. ಅಷ್ಟರೊಳಗೆ ತಾಲೂಕಿನಲ್ಲಿರುವ 30 ಸಾವಿರಕ್ಕೂ ಹೆಚ್ಚು "ಐಪಿ' ಸೆಟ್​ ಹೊಂದಿರುವ ರೈತರು ತಹಸೀಲ್ದಾರ್​ ಮೂಲಕ ತಕರಾರು ಅರ್ಜಿ ಸಲ್ಲಿಸಲಿದ್ದಾರೆ ಮತ್ತು ಜೂ.22 ರಂದು ತಾಲೂಕಿನ ಈರಲಗೆರೆಯಿಂದ ನಗರದವರೆಗೂ ಒಂದು ಸಾವಿರ ರೈತರು ಜಾಥಾ ಮೂಲಕ ತೆರಳಿ ಖಾಸಗೀಕರಣದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಎಇಇ ಮನೋಹರ್​, ಸೋಮಶೇಖರ್​, ಕಲ್ಯಾಣ ಸಮಿತಿಯ ಕುಮಾರಸ್ವಾಮಿ, ಬಿಳಿಗೆರೆ, ನೊಣವಿನಕೆರೆ, ಹೊನ್ನವಳ್ಳಿಯ ಸೆಕ್ಷನ್​ ಆಫೀಸರ್​ಗಳು, ಲೈನ್​ಮೆನ್​ಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net