ವೈದ್ಯರೆಂದರೆ ಮಕ್ಕಳಿಗೆ ಭಯ ಬೀಳಿಸಬೇಡಿ

Do not scare children about doctors.
Do not scare children about doctors.
Published on
ಪಾವಗಡ: ಮಕ್ಕಳು ಹಠ ಮಾಡುವಾಗ ವೈದ್ಯರಿಗೆ ಹೇಳಿ ಇಂಜೆಕ್ಷನ್​ ಹಾಕಿಸುತ್ತೇನೆ ಎಂದು ಭಯ ಬೀಳಿಸಬೇಡಿ ವೈದ್ಯರ ಮೇಲೆ ಮಕ್ಕಳಿಗೆ ಪ್ರೀತಿ ವಿಶ್ವಾಸ ಇರುವಂತ ವಾತಾವರಣ ನಿಮಾರ್ಣ ಮಾಡಬೇಕು ಎಂದು ಮಕ್ಕಳ ವೈದ್ಯ ಡಾ.ಅಜಯ್​ ತಿಳಿಸಿದರು.
ಪಟ್ಟಣದ ಅಕ್ಷಯ ಬ್ಲೂ ಜೆಮ್​ ಶಾಲೆಯಲ್ಲಿ ಸೇವಾ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮಕ್ಕಳಿಗೆ ಜಂಕ್​ಫುಡ್​, ಬೇಕರಿ ತಿನುಸು ತಿನ್ನಿಸಬೇಡಿ, ಅವುಗಳಿಂದ ದೂರವಿದ್ದರೆ ಆಸ್ಪತ್ರೆಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ. ಆದ್ದರಿಂದ ಮಕ್ಕಳನ್ನು ಆರೋಗ್ಯವಂತರನ್ನಾಗಿಸಲು ತಾಯಂದಿರು ಮುಖ್ಯವಾಗಿ ಉತ್ತಮ ಆಹಾರ ನೀಡಬೇಕೆಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಬಾಬು ಮಾತನಾಡಿ, ನಾವು ರೋಗಿಗಳಿಗೆ ಎಷ್ಟೇ ಚಿಕಿತ್ಸೆ ನೀಡಿದರೂ ಸಹ ಒಂದಲ್ಲ ಒಂದು ಸಾರಿ ವೈದ್ಯರನ್ನ ರೋಗಿಗಳು, ಸಂಬಂಧಿಕರು ಬೈಯುತ್ತಾರೆ ಇದು ಸರ್ವೇಸಾಮಾನ್ಯ. ಆದರೆ ಸೇವಾ ಟ್ರಸ್ಟ್​ ಅವರು ನಮ್ಮ ಸೇವೆ ಗುರುತಿಸಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಪ್ರಯುಕ್ತ ನಮ್ಮನ್ನು ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಸಂತೋಷ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ್​ ಬಾಬು, ತಾಲೂಕು ವೈದ್ಯಾಧಿಕಾರಿ ಡಾ.ನಾಗೇಶ್​ ನಾಯ್ಕ, ಡಾ.ನವೀನ್​, ಡಾ.ರಾಜೇಶ್​, ಮಾತನಾಡಿದರು. ಸೇವಾ ಟ್ರಸ್ಟಿನ ಅಧ್ಯಕ್ಷ ಮಾನಂ ಶಶಿಕಿರಣ್​, ಸರ್ಕಾರಿ ಆಸ್ಪತ್ರೆಯ ಸೂಪರ್ವೈಸರ್​ ರಮೇಶ್​, ಅಕ್ಷಯ ಬ್ಲೂ ಜೆಮ್​ ಶಾಲೆಯ ಆಡಳಿತಾಧಿಕಾರಿ ಸಂಧ್ಯಾಮಾನಂ, ಶಿಕ್ಷಕರಾದ ಮಂಜುನಾಥ್​, ಭವ್ಯಾ, ಸೀಮಾ, ವಿಮಲಾ, ನಜ್ರಮಾ, ಗಾನಶ್ರಿ, ಪುಷ್ಪಾ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net