ಲಂಚಕ್ಕೆ ಬೇಡಿಕೆ: ನಗರದ ಉಪ್ಪಾರಹಳ್ಳಿ ನಿವಾಸಿ ಆಟೋ ಚಾಲಕ ಅವಿನಾಶ್ ಎಂಬುವರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮಂಗಳಮ್ಮರ ಕಣ್ಣಿನ ಪೊರೆ ಚಿಕಿತ್ಸೆಗೆ ತೆರಳಿದ್ದಾಗ ವೈದ್ಯ ಡಾ.ಸವಿತಾ ಚಿಕಿತ್ಸೆ ಬಳಿಕ ಲೆನ್ಸ್ ಅಳವಡಿಸಲು 6 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದಾಗ ಬೆಂಗಳೂರಿನ ಮಿಂಟೋ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದು, ಇಲ್ಲಾದರೆ 6 ಸಾವಿರ ಕೊಟ್ಟರೆ ಶಸ್ತ್ರಚಿಕಿತ್ಸೆ ಮಾಡಿ ಲೆನ್ಸ್ ಹಾಕುವುದಾಗಿ ತಿಳಿಸಿದ್ದರು. ಇದರಿಂದ ಬೇಸರಗೊಂಡ ಅವಿನಾಶ್ ಲೋಕಾಯುಕ್ತ ಕಚೇರಿ ಬಾಗಿಲುತಟ್ಟಿದ್ದರು.