ಇಂದಿರಾದೇವಿಯವರ ಸೇವೆಯನ್ನು ಗಮನಿಸಿದಾಗ, ಅವರ ಸಾಧನೆ ಕೇವಲ ‘ಉತ್ತಮ ಫಲಿತಾಂಶ’ ಎಂಬ ಒಂದೇ ಮಾನದಂಡಕ್ಕೆ ಸೀಮಿತವಾಗುವುದಿಲ್ಲ. ಉತ್ತಮ ಬೋಧನೆ, ತಂತ್ರಜ್ಞಾನ ಬಳಕೆ, ವಿದ್ಯಾರ್ಥಿ ಮಾರ್ಗದರ್ಶನ, ದಾಖಲಾತಿ ಹೆಚ್ಚಳ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಿಕ್ಷಣದತ್ತ ತರುವುದು, CWSN ಮಕ್ಕಳ ಬಗ್ಗೆ ಕಾಳಜಿ, ವಿದ್ಯಾರ್ಥಿಗಳ ಸುರಕ್ಷತೆ, ಶಾಲೆಯ ಭೌತಿಕ ಅಭಿವೃದ್ಧಿ ಹಾಗೂ ಸಮುದಾಯದ ಸಹಭಾಗಿತ್ವ—ಇವೆಲ್ಲವನ್ನೂ ಸಮನ್ವಯಗೊಳಿಸಿರುವುದು ಅವರ ಸೇವೆಯ ವಿಶೇಷತೆ ಎನ್ನಿಸಿದೆ.