ಗೋಪಾಲಕರಿಗೆ ಮೇವನ್ನು ವಿತರಣೆ

Distribution of fodder to cowherds
Distribution of fodder to cowherds
Published on
ಪಾವಗಡ: ಶ್ರೀರಾಮಕೃಷ್ಣ ಸೇವಾಶ್ರಮ ಮೇವು ವಿತರಣಾ ಕೇಂದ್ರದಲ್ಲಿ ತಾಲೂಕಿನ ಸುಮಾರು 220ಕ್ಕೂ ಹೆಚ್ಚು ಗೋಪಾಲಕರಿಗೆ ಸೇವಾಶ್ರಮದ ಅಧ್ಯಕ್ಷ ಶ್ರೀ ಜಪಾನಂದ ಸ್ವಾಮೀಜಿ ಬುಧವಾರ ಮೇವನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀ ರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್​ ಫೌಂಡೇಷನ್​ ಹಾಗೂ ಮೂರ್ತಿ ಟ್ರಸ್ಟ್​ ಬೆಂಗಳೂರು ಸಹಯೋಗದೊಂದಿಗೆ ಚಳ್ಳಕೆರೆ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಪ್ರತಿ ದಿನ ಸುಮಾರು 8ರಿಂದ 10 ಲೋಡ್​ ಮೇವನ್ನು ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಮೇವನ್ನು ತರಿಸಲಾಗುತ್ತು. ಆದರೆ ಅಲ್ಲಿ ಮೇವು ಲಭ್ಯವಾಗದ ಕಾರಣ ಮುಂದಿನ ದಿನಗಳಲ್ಲಿ ಮಂಡ್ಯ ಅಥವಾ ದಾವಣಗೆರೆಯಿಂದ ಖರೀದಿಸಬೇಕಾಗಿದೆ ಎಂದು ತಿಳಿಸಿದರು.
ಇಂದು ತಾಲೂಕಿನ ದೂರದ ಗ್ರಾಮಗಳಾದ ಪಳವಳ್ಳಿ, ಗೋರಸಮಾವು, ವಡ್ರೇವು, ರೊಪ್ಪ, ಕಣಿವೇನಹಳ್ಳಿ ಮುಂತಾದ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗೋಪಾಲಕರು ಬಂದು ಮೇವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮಹತ್ಕಾರ್ಯಕ್ಕೆ ಎಲ್ಲ ವರ್ಗದ ಜನರಿಂದ ಸಹಕಾರ ದೊರೆಯುತ್ತಿರುವುದು ತುಂಬಾ ಸಂತೋಷಕರವಾದ ವಿಚಾರ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net