ಬೈಕ್ , ಲಾರಿ ನಡುವೆ ಅಪಘಾತ ಸ್ಥಳದಲ್ಲಿಯೇ ಯುವಕ ಸಾವು

ಭಾಸ್ಕರ್
ಭಾಸ್ಕರ್
Published on

ಪ್ರಮುಖ ಮುಖ್ಯಾಂಶಗಳು

  • ಲಾರಿ, ಬೈಕ್​ ಮುಖಾಮುಖಿ ಡಿಕ್ಕಿ
  • ಯುವಕ ಸ್ಥಳದಲ್ಲಿಯೇ ಸಾವು
ತುಮಕೂರು: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಯುವಕ ಗಂಭೀರವಾಗಿರುವ ಘಟನೆ ಪಾವಗಡ ಪಟ್ಟಣದ ಕಣಿವೆ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಪಟ್ಟಣದ ಶಾಂತಿನಗರದ ನಿವಾಸಿ ಭಾಸ್ಕರ್ (24) ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದು ಈತನ ಜೊತೆಗಿದ್ದ ಮತ್ತೊಬ್ಬ ಸಾಗರ್ ಎನ್ನುವ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಈತನನ್ನು ಬೆಂಗಳೂರಿಗೆ ರವಾನಿಸಲಾಗಿದೆ.
ತುಮಕೂರು ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಲಾರಿ ಯಾವುದೇ ಸಿಗ್ನಲ್ ನೀಡದೆ ಇರುವುದರಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net