ಸಮಾಜದ ಏಳಿಗೆ ಧರ್ಮಸ್ಥಳದ ಕೊಡುಗೆ ಅಪಾರ

Dharmasthala's contribution to the progress of society is immense.
Dharmasthala's contribution to the progress of society is immense.
Published on
ಗುಬ್ಬಿ: ಎಂಟುನೂರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳದಲ್ಲಿ ನಿರಂತರವಾಗಿ ಚತುರ್​ ದಾನಗಳು ನಡೆಯುತ್ತವೆ ಎಂದು ತಾಲೂಕು ಯೋಜನಾಧಿಕಾರಿ ಜಯಂತಿ ತಿಳಿಸಿದರು.
ತಾಲೂಕಿನ ಸಿ.ಎಸ್​.ಪುರ ಹೋಬಳಿ ಚಿನ್ನನಾಯಕನಪಾಳ್ಯದ ಶ್ರೀ ದೊಡ್ಡಮ್ಮದೇವಿ ದೇವಸ್ಥಾನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮುಂಜೂರಾದ 2.5 ಲಕ್ಷ ರೂ. ಡಿಡಿ ವಿತರಿಸಿ ಮಾತನಾಡಿದರು.
ಧರ್ಮಸ್ಥಳದಲ್ಲಿ ಪ್ರಮುಖವಾಗಿ ಅನ್ನದಾನ, ವಸ್ತ್ರದಾನ, ವಿದ್ಯಾದಾನ, ಅಭಯದಾನ ನೀಡುತ್ತಿದ್ದು, ಪ್ರಮುಖವಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಅಭಯದಾನದ ಮೂಲಕ ಪೂಜ್ಯರ ಮಾರ್ಗದರ್ಶನದಲ್ಲಿ ಹಲವಾರು ದೇವಾಲಯಗಳಿಗೆ ಹಣ ನೀಡಿ ದೇವಸ್ಥಾನದ ಜೀಣೋರ್ದ್ಧಾರಕ್ಕೆ ಕೈಜೋಡಿಸಲಾಗುತ್ತಿದೆ. ದೇವಸ್ಥಾನ ಸುಸಜ್ಜಿತವಾಗಿ ನಿಮಾರ್ಣವಾಗಬೇಕಾದರೆ ಗ್ರಾಮಸ್ಥರೆಲ್ಲರೂ ಸಂಘಟಿತರಾಗಿ ಕೈಜೋಡಿಸಿದಾಗ ಮಾತ್ರ ಸಾಧ್ಯ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net