ಸ್ಯಾಟ್ನಿಂದ ದೇವರಾಯನದುರ್ಗದಲ್ಲಿ ಪ್ಲಾಸ್ಟಿಕ್ ಕ್ಲೀನ್ ಡ್ರೈವ್
ಪ್ಲಾಸ್ಟಿಕ್ ಕ್ಲೀನ್ ಡ್ರೈವ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಿದ್ಧಗಂಗಾ ಅಡ್ವೆಂಚರ್ - ಟ್ರೆಕ್ಕಿಂಗ್ ತಂಡ
ಜೂ. 7 ರಂದು ಸ್ವಚ್ಛತಾ ಆಂದೋಲನ
1 ಸಾವಿರಕ್ಕು ಹೆಚ್ಚು ಸ್ವಯಂಸೇವಕರು ಭಾಗಿ
ತುಮಕೂರು: ಸಿದ್ಧಗಂಗಾ ಅಡ್ವೆಂಚರ್ & ಟ್ರೆಕ್ಕಿಂಗ್ ತಂಡ (ಸ್ಯಾಟ್) ನೇತೃತ್ವದಲ್ಲಿ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ "ಪ್ಲಾಸ್ಟಿಕ್ ಕ್ಲೀನ್ ಡ್ರೈವ್' ಕಾರ್ಯಕ್ರಮವನ್ನು ಜೂ.7 ರಂದು ಬೆಳಗ್ಗೆ 6.30ಕ್ಕೆ ಆಯೋಜಿಸಲಾಗಿದೆ.
ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ನಿಯತ್ರಣ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕ್ಲೀನ್ ಡ್ರೈವ್ ಹಮ್ಮಿಕೊಳ್ಳಲಾಗಿದ್ದು
ಜಿಲ್ಲಾಧಿಕಾರಿ ಶುಭಕಲ್ಯಾಣ್, ಡಿಸಿಎಫ್ ಜಿ.ಆರ್.ಶಶಿಧರ್ ಭಾಗವಹಿಸುವರು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ವಿವಿಧ ಶಿಕ್ಷಣ ಹಾಗೂ ಸಂಘ ಸಂಸ್ಥೆಗಳಿಂದ 1000ಕ್ಕು ಹೆಚ್ಚು ಸ್ವಯಂಸೇವಕರು ಈ ಪರಿಸರ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸುವರು.
2022 ಮತ್ತು 2024ರಲ್ಲಿ ಯಶಸ್ವಿಯಾಗಿ ನಡೆದ ಕ್ಲೀನ್ ಡ್ರೈವ್ಗಳ ಮುಂದುವರಿಕೆಯಾಗಿ 3ನೇ ಆವೃತ್ತಿಯಾಗಿದೆ.