ಎಸ್​ಐಆರ್​ ಜನ ಜಾಗೃತಿ ಆಂದೋಲನಕ್ಕೆ ರ್ನಿಣಯ

ತುಮಕೂರಿನಲ್ಲಿ ಜನಸ್ಪಂದನ ಟ್ರಸ್ಟ್​, ಜನಪರ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕುರಿತ ದುಂಡು ಮೇಜಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ತುಮಕೂರಿನಲ್ಲಿ ಜನಸ್ಪಂದನ ಟ್ರಸ್ಟ್​, ಜನಪರ ಸಂಘಟನೆ ಸಹಯೋಗದಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕುರಿತ ದುಂಡು ಮೇಜಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ದುಂಡು ಮೇಜಿನ ಸಭೆಯಲ್ಲಿ ಪ್ರಗತಿಪರರು ಭಾಗಿ
  • ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಆದ್ಯತೆ
ತುಮಕೂರು: ದೇಶದಲ್ಲಿ ಆರಂಭಿಸಲಾಗಿರುವ ಎಸ್​ಐಆರ್​ ಪ್ರಕ್ರಿಯೆಯಿಂದ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಹಕ್ಕಿನಿಂದ ವಮಚಿತರಾಗಲಿದ್ದಾರೆ ಹಾಗಾಗಿ, ಈ ಬಗ್ಗೆ ಶಾಲೆ, ಕಾಲೇಜುಗಳು, ಗ್ರಾಮೀಣ ಭಾಗದಲ್ಲಿ ಜಾಗೃತಿ ಆಂದೋಲನ ನಡೆಸಲು ತುಮಕೂರಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ತುಮಕೂರು ನಗರದ ಪ್ರೆಸ್​ ಕ್ಲಬ್​ ಆವರಣದಲ್ಲಿ ಗುರುವಾರ ಜನಸ್ಪಂದನ ಟ್ರಸ್ಟ್​, ಜನಪರ ಸಂಘಟನೆಗಳಿಂದ ಸಹಯೋಗದಲ್ಲಿ ಆಯೋಜಿಸಿದ್ದ ಎಸ್​ಐಆರ್​ ಕುರಿತ ದುಂಡು ಮೇಜಿನ ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.
ಜನ ಜಾಗೃತಿ ಮೂಡಿಸುವ ಜತೆಗೆ ತರಬೇತಿ ಕಾರ್ಯಾಗಾರ ಆಯೋಜನೆ, ಕಾನೂನು ಸಲಹೆ ನೀಡುವುದು. ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ಮಾಡುವುದು. ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಬಗ್ಗೆ ತೀಮಾರ್ನ ಕೈಗೊಳ್ಳಲಾಯಿತು.
"ಅರ್ಹ ಮತದಾರರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಈ ಕುರಿತು ಜನರಲ್ಲಿ ಮೂಡಿರುವ ಪೂರ್ವಗ್ರಹ ದೂರ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಲ್ಲಿ ಮಾಹಿತಿ ಹಂಚಿಕೊಳ್ಳಬೇಕು' ಎಂದು ಜನ ಸ್ಪಂದನ ಟ್ರಸ್ಟ್​ ಅಧ್ಯಕ್ಷ ಟೂಡ ಶಶಿಧರ್​ ಹೇಳಿದರು.
ಜಿಲ್ಲೆಯ ಎಲ್ಲ ಭಾಗದಲ್ಲಿ ಜನ ಸ್ಪಂದನ ಟ್ರಸ್ಟ್​ ಮೂಲಕ ಎಸ್​ಐಆರ್​ ಪ್ರಕ್ರಿಯೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಜನಪರ ಸಂಘಟನೆಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು. ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ಹೊರಗಡೆ ಉಳಿಯದಂತೆ ನೋಡಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ತಿಪಟೂರಿನಲ್ಲಿ ಜೂನ್​ 19 ರಂದು ಜಾಗೃತಿ ಕಾರ್ಯಾಗಾರ ಆಯೋಜನೆ ಮಾಡಲಾಗುವುದು
ಎಂದರು.
ಕಸಾಪ ಮಾಜಿ ಅಧ್ಯಕ್ಷ ಬಾ.ಹ.ರಮಾಕುಮಾರಿ, 'ಸಂವಿಧಾನ ನೀಡಿದ ಮತದಾನದ ಹಕ್ಕು ಎಲ್ಲರಿಗೂ ಸಿಗಬೇಕು. ಯಾರೊಬ್ಬರೂ ಹಕ್ಕಿನಿಂದ ವಂಚಿತರಾಗಬಾರದು. ಜನಾಧಿಕಾರ ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಚುನಾವಣೆ ಆಯೋಗ ಕೈಗೊಂಡಿರುವ ಎಐಆರ್​ ಬಗ್ಗೆ ಎಲ್ಲೆಡೆ ವ್ಯಾಪಕ ಪ್ರಚಾರ ನಡೆಸಬೇಕು. ಸಾರ್ವಜನಿಕರಿಗೆ ಪೂರಕ ದಾಖಲೆ ಸಲ್ಲಿಸುವ ಕುರಿತು ಅರಿವು ಮೂಡಿಸಬೇಕು' ಎಂದು ಸಲಹೆ ಮಾಡಿದರು.
ನಿವೃತ್ತ ಡಿಡಿಪಿಐ ಕೆ.ದೊರೈರಾಜು ಮಾತನಾಡಿ, ಎಸ್​ಐಆರ್​ ಕುರಿತು ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕು. ಈ ಪ್ರಕ್ರಿಯೆಯ ಕಾನೂನು ಸರಳೀಕರಣ ಮಾಡಬೇಕು. ವಿದ್ಯಾರ್ಥಿ, ಯುವ ಸಮೂಹ ಹೋರಾಟಕ್ಕೆ ಕೈಜೋಡಿಸಬೇಕು' ಎಂದು ಕರೆ ನೀಡಿದರು.
ತುಮಕೂರು ವಿವಿ ಸಿಂಡಿಕೇಟ್​ ಸದಸ್ಯ ಶಿವಣ್ಣ, ಪರಿಸರವಾದಿ ಸಿ.ಯತಿರಾಜು, ಸಿಐಟಿಯು ಜಿಲ್ಲಾಧ್ಯಕ್ಷ ಮುಜೀಬ್​, ಕರ್ನಾಟಕ ಚೆಸ್​ ಅಸೋಸಿಯೇಷನ್​ ಅಧ್ಯಕ್ಷ ಟಿ.ಎನ್​.ಮಧುಕರ, ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ, ಎದ್ದೇಳು ಕರ್ನಾಟಕದ ಇಂದಿರಮ್ಮ,
ರಾಮಕೃಷ್ಣ, ಮುಖಂಡರಾದ ತಾಜ್​ ಉದ್ದೀನ್​ ಷರೀಫ್​, ಮಂಜುನಾಥ್​ ಹೆತ್ತೇನಹಳ್ಳಿ, ಸಂಶೋಧನಾರ್ಥಿಗಳಾದ ರಾಹುಲ್​, ಗಂಗಾಧರ್​ ಬಾಣಸಂದ್ರ, ಅಮರ್​ ಹೊಳೆಗದ್ದೆ, ಸೀಮಾ ಅಫೀಕಾ, ಪಾತಲಿಂಗಯ್ಯ, ಪಾರ್ವತಿ, ರಾಘವೇಂದ್ರ, ಜಾಗೃತ ಕರ್ನಾಟಕದ ಮಂಜುಳ ಮತ್ತಿತರರು ಇದ್ದರು.
ದೇಶದಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಆದರೆ, ದೇಶಾದ್ಯಂತ ಆರಂಭಿಸಿರುವ ಎಸ್​ಐಆರ್​ ಮಹಿಳೆಯರೂ ಸೇರಿದಂತೆ ಸಾಕಷ್ಟು ಜನರು ಮತದಾನದಿಂದ ವಂಚಿತರಾಗುವ ಆತಂಕ ಸೃಷ್ಠಿಸಿದೆ. ಈ ಬಗ್ಗೆ ಜಿಲ್ಲೆಯೆಲ್ಲೆಡೆ ಜನ ಜಾಗೃತಿ ನಡೆಸಲು ತೀರ್ಮಾನಿಸಲಾಗಿದ್ದು ತಿಪಟೂರಿನಲ್ಲಿ ಜೂನ್​ 19 ರಂದು ಜಾಗೃತಿ ಕಾರ್ಯಾಗಾರ ನಡೆಯಲಿದೆ.
ಟೂಡಾ ಶಶಿಧರ್​
ಅಧ್ಯಕ್ಷ, ಜನಸ್ಪಂದನ ಟ್ರಸ್ಟ್​,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net