ತುಮಕೂರು: ಬೆಂಗಳೂರಿನ ಎಸಿವಿ ಡಿಸೈನರ್ಸ್ ಲಿ, ತನ್ನ ಸಿಎಸ್ಆರ್ ನಿಧಿಯಿಂದ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಗತ್ಯವಾಗಿದ್ದ ಕಂಪ್ಯೂಟರ್ ಪ್ರಯೋಗಾಲಯವನ್ನು 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದು ವಿದ್ಯಾರ್ಥಿಗಳ ಬಳಕೆಗೆ ಬುಧವಾರ ನಡೆದ ಸರಳ ಸಮಾರಂಭದಲ್ಲಿ ನೀಡಲಾಯಿತು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ರಮೇಶ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿಯೇ ಕೌಶಲ ಪಡೆಯುವ ಮೂಲಕ ತಾಂತ್ರಿಕ ಜ್ಞಾನ ಹೆಚ್ಚಿಸಿಕೊಂಡು ಉದ್ಯೋಗ ಪಡೆಯಲು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಆರ್.ರಾಜೇಶ್ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ, ನಾಯಕತ್ವ ಗುಭ ಮೈಗೂಡಿಸಿಕೊಂಡು ಜೀವನ ರೂಪಿಸಿಕೊಂಡಿರುವ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ ಎಂದರು.
ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಜಯರಾಂ ರಾಮಯ್ಯ ಮಾತನಾಡಿ, ಉಪನ್ಯಾಸಕರ ಮನವಿಯಂತೆ
ಕಂಪನಿಯಿಂದ ಕಂಪ್ಯೂಟರ್ ಪ್ರಯೋಗಾಲಯಕ್ಕೆ ಸಹಾಯ ಮಾಡಲಾಗಿದೆ. ಪ್ರಯೋಗಾಲಯದಿಂದ ವಿದ್ಯಾರ್ಥಿಗಳು ಉತ್ತಮ ಜ್ಞಾನ ಪಡೆಯಲಿ ಎಂದರು.
ಕಂಪನಿ ಸಿಎಸ್ಆರ್ ಸದಸ್ಯೆ ವಿಜಯ ಭಾಸ್ಕರ್, ಪ್ರಾಚಾರ್ಯ ಚಂದ್ರಶೇಖರ್, ಉಪಪ್ರಾಂಶುಪಾಲ ಡಾ.ಕೆ.ಪಿ.ಸೋಮಶೇಖರ್, ಜಿಪಿಟಿ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಮೇಶ್, ವಿಭಾಗಾಧಿಕಾರಿ ಗಿರೀಶ್ ಕುಮಾರ್, ಕವಿತಾ, ಕೃಷ್ಣಮೂರ್ತಿ, ಹರೀಶ್, ಕೆ.ಆರ್.ಬಸವಲಿಂಗಯ್ಯ ಮತ್ತಿತರರು ಇದ್ದರು.
ಟಿ.ಕೆ.ರಮೇಶ್, ಚಂದ್ರಶೇಖರ್, ಜಯರಾಂ ರಾಮಯ್ಯ ಮತ್ತಿತರರು ಇದ್ದರು.