ಅಪರಿಚಿತರಿಂದ ಚಾಕು ಇರಿದು ವ್ಯಕ್ತಿ ಕೊಲೆ?

ಕೆಂಕೆರೆಯ ಶಾಮಿಯಾನ ಮಂಜುನಾಥ್
ಕೆಂಕೆರೆಯ ಶಾಮಿಯಾನ ಮಂಜುನಾಥ್
Published on
ತುಮಕೂರು: ಹೋಬಳಿಯ ಕೆಂಕೆರೆ ಗ್ರಾಮದ ಶಾಮಿಯಾನದ ಕೆ.ಎಂ.ಮಂಜುನಾಥ್(41) ಎಂಬುವವರಿಗೆ ದುಷ್ಕರ್ಮಿಗಳು ಚಾಕು ಇರಿದು ಕೊಂದಿರುವ ಘಟನೆ ಸುಮಾರು ಭಾನುವಾರ ರಾತ್ರಿ ನಡೆದಿದೆ.
ಬಕಾಯಪ್ಪನ ಗುಡ್ಲು ಸಮೀಪದಲ್ಲಿ ನಿರ್ಮಿಸಿದ್ದ ಹೊಸ ಮನೆ "ರಾಯರ ಮನೆ"ಯಲ್ಲಿ ಇಬ್ಬರು ಹೆಣ್ಣು‌ ಮಕ್ಕಳೊಂದಿಗೆ ಇದ್ದಾಗ ಐದಾರು ಜನರ ಗುಂಪು ಆಗಮಿಸಿ ಚಾಕುವಿನಿಂದ ಚುಚ್ಚಿ ಪಾರಾರಿಯಾಗಿದ್ದಾರೆ ಎನ್ನಲಾಗಿದೆ.
ಪತ್ನಿ ಕೆಂಕೆರೆಯಲ್ಲಿ ದಿನಸಿಯಲ್ಲಿ ಅಂಗಡಿಯಲ್ಲಿದ್ದರು ಎನ್ನಲಾಗಿದ್ದು ಪ್ರಕರಣದ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ.
ಮನೆಯಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸುತ್ತಿರುವ ಹುಳಿಯಾರು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net