ಬುಕ್ಕಾಪಟ್ಟಣದಲ್ಲಿ 100 ಗ್ರಾಂ ಆಭರಣ ದೋಚಿದ ಕಳ್ಳರು

ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಕಳ್ಳರು ದೋಚಿರುವ ಮನೆ
ಶಿರಾ ತಾಲೂಕು ಬುಕ್ಕಾಪಟ್ಟಣದಲ್ಲಿ ಕಳ್ಳರು ದೋಚಿರುವ ಮನೆ
Published on
ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣದ ಎಸ್‌ಬಿಐ ನಿವೃತ್ತ ಸಿಬ್ಬಂದಿ ನಾಗರತ್ನಮ್ಮ ಎಂಬುವವರ ಮನೆಗೆ ನುಗ್ಗಿದ ಕಳ್ಳರು 100ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾಗಿದ್ದಾರೆ
ಬುಕ್ಕಾಪಟ್ಟಣದ ಹಾಲಿನ ಡೈರಿ ಮುಂಭಾಗದ ರಸ್ತೆಯ ಮನೆಯಲ್ಲಿ ನಾಗರತ್ನಮ್ಮ ವಾಸವಾಗಿದ್ದು ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು ರಾತ್ರಿ ಯಾರು ಇಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆಯ ಒಳಗೆ ಬೀರುವಿನಲ್ಲಿ ಇದ್ದ ಸರ, ರಿವರ್ಸ್ ಚೈನ್, ಕಿವಿಯೋಲೆ ದೋಚಿ ಪರಾರಿಯಾಗಿದ್ದಾರೆ.
ಬೆಳಗ್ಗೆ ಮನೆಯ ಬಾಗಿಲು ಮುರಿದಿರುವುದನ್ನು ಗಮನಿಸಿದ ನೆರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದಾಗ ಪ್ರಕರಣ ಬಯಲಾಗಿದೆ. ಸ್ಥಳಕ್ಕೆ ಶ್ವಾನದಳ,ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷ್ಯ ಕಲೆಹಾಕಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net