ಪೋಲಿಯೋಮುಕ್ತ ಭಾರತ ನಿಮಾರ್ಣ

Creating a polio-free India
Creating a polio-free India
Published on
ಗುಬ್ಬಿ : ಭಾರತವನ್ನು ಪೋಲಿಯೋಮುಕ್ತ ದೇಶವನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ರಾಷ್ಟ್ರೀಯ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್​ ನ್ಯಾಯಾಧೀಶ ಎಸ್​.ಬಿ.ಕಿರಣ್​ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಮುಂಭಾಗ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್​ ಪೋಲಿಯೋ ಅಭಿಯಾನದಲ್ಲಿ ಮಾತನಾಡಿ, ಹುಟ್ಟಿದ ಮಗುವಿನಿಂದ ಐದು ವರ್ಷದವರೆಗೆ ಎಲ್ಲ ಮಕ್ಕಳಿಗೂ ಎರಡು ಹನಿ ಲಸಿಕೆ ಹಾಕಿಸುವ ಮೂಲಕ ಪೋಲಿಯೋಮುಕ್ತ ಭಾರತ ನಿಮಾರ್ಣ ಮಾಡಲು ಕೈಜೋಡಿಸಬೇಕು ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್​ ಮಾತನಾಡಿ, ಜೂ.29ರಿಂದ ಜು.1ವರೆಗೆ ಮನೆ ಮನೆಗೆ ತೆರಳಿ ಪೋಲಿಯೋ ಹನಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹಾಕಲಿದ್ದು, ಎಲ್ಲ ಪಾಲಕರು ಸಹಕರಿಸಬೇಕು ಎಂದರು.
ತಾಪಂ ಇಒ ರಂಗನಾಥ್​, ಬಿಇಒ ಎಂ.ಎಸ್​.ನಟರಾಜು, ಸಿಡಿಪಿಒ ಕೃಷ್ಣಮೂರ್ತಿ, ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮಯ್ಯ, ಲಯನ್ಸ್​ ಸಂಸ್ಥೆ ಜಿ.ಆರ್​.ಶಿವಕುಮಾರ್​, ಜಗದೀಶ್​, ಮಧುಸೂದನ್​, ಜಯಮ್ಮ, ರಮೇಶ್​, ಮಲ್ಲಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net