ಸಮುದಾಯ ಅಭಿವೃದ್ಧಿಗೆ ಸಹಕಾರ ಅಗತ್ಯ

ಗುಬ್ಬಿ ತಾಲೂಕಿನ ಚಿಕ್ಕಹಳ್ಳಿಯಲ್ಲಿ ಕುಂಚುಟಿಗರ ೇಮಾಭಿವೃದ್ಧಿ ಸಂದಿಂದ ಆಯೋಜಿಸಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ. ಶ್ರೀ ಹನುಮಂತನಾಥ ಸ್ವಾಮೀಜಿ, ಎಸ್​.ಆರ್​.ಶ್ರೀನಿವಾಸ್​, ಮುರಳೀಧರ ಹಾಲಪ್ಪ, ಜಯಣ್ಣ, ರಂಗನಾಥ್​ ಇತರರು ಇದ್ದರು
ಗುಬ್ಬಿ ತಾಲೂಕಿನ ಚಿಕ್ಕಹಳ್ಳಿಯಲ್ಲಿ ಕುಂಚುಟಿಗರ ೇಮಾಭಿವೃದ್ಧಿ ಸಂದಿಂದ ಆಯೋಜಿಸಿಸಿದ್ದ ಪ್ರತಿಭಾ ಪುರಸ್ಕಾರದಲ್ಲಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಡಾ. ಶ್ರೀ ಹನುಮಂತನಾಥ ಸ್ವಾಮೀಜಿ, ಎಸ್​.ಆರ್​.ಶ್ರೀನಿವಾಸ್​, ಮುರಳೀಧರ ಹಾಲಪ್ಪ, ಜಯಣ್ಣ, ರಂಗನಾಥ್​ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಮುದಾಯ ಅಭಿವೃದ್ಧಿಗೆ ಸಹಕಾರ ಅಗತ್ಯ
ಎಂ.ಎನ್.ಕೋಟೆ: ಶಿಣಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಸಮಾಜವನ್ನು ಬದಲಾವಣೆ ಮಾಡಲು ಸಾಧ್ಯ ಎಂದು ಎಲೆರಾಂಪುರ ಕುಂಚುಟಿಗ ಮಠದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.
ಎಸ್​ಎಸ್​ಎಲ್​ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಕುಂಚುಟಿಗ ಸಮುದಾಯದ ವಿದ್ಯಾರ್ಥಿಗಳಿಗೆ ಗುಬ್ಬಿ ತಾಲೂಕಿನ ಚಿಕ್ಕಹಳ್ಳಿಯಲ್ಲಿ ಕುಂಚುಟಿಗರ ೇಮಾಭಿವೃದ್ಧಿ ಸಂದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಇದ್ದಾಗ ಏನು ಬೇಕಾದರೂ ಸಾಧಿಸಬಹುದು. ನಿಮ್ಮ ಸಾಧನೆಗೆ ನಮ್ಮೆಲ್ಲರ ಸಹಕಾರ ಇರುತ್ತದೆ. ಶಿಣ ಎಂಬುದನ್ನು ಶಕ್ತಿ ಎಂದು ಅರ್ಥ ಮಾಡಿಕೊಂಡು ಉನ್ನತ ಶಿಣ ಪಡೆದು ಸಾಧನೆ ಮಾಡಬೇಕು ಎಂದರು.
ನಮ್ಮ ಸಮುದಾಯ ಅಭಿವೃದ್ಧಿಯಾಗಬೇಕೆಂದರೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಗುಬ್ಬಿ ಪಟ್ಟಣದಲ್ಲಿ ನಮ್ಮ ಸಮುದಾಯಕ್ಕೆ ಸಮುದಾಯಭವನ ನಿರ್ಮಾಣ ಮಾಡುವುದಕ್ಕೆ ಶಾಸಕರು ಜಾಗವನ್ನು ನೀಡಿದರೆ ಖಂಡಿತವಾಗಿ ಹೆಚ್ಚಿನ ರೀತಿಯ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಶಾಸಕ ಎಸ್​.ಆರ್​.ಶ್ರೀನಿವಾಸ್​ ಮಾತನಾಡಿ, ವಿದ್ಯಾರ್ಥಿಗಳು ಶಿಣ ಪಡೆದಾಗ ಮಾತ್ರ ಸಮಾಜದ ದಿಕ್ಕನ್ನು ಬದಲಾವಣೆ ಮಾಡಬಹುದು. ಆದರೆ ಇತ್ತೀಚೆಗೆ ಓದಿರುವವರಿಂದಲೇ ಸಮಾಜಕ್ಕೆ ಕಂಟಕವಾಗುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ತಂದೆ&ತಾಯಿ ನೀವು ಓದುವಂತಹ ಸಂದರ್ಭದಲ್ಲಿ ಕಷ್ಟ ಬಿದ್ದು ಓದಿಸಿ ಕೆಲಸ ಕೊಡಿಸಿ ವಿದೇಶಕ್ಕೆ ಕಳುಹಿಸುತ್ತಾರೆ. ಆದರೆ ಅವರ ಕೊನೆಯ ದಿನಗಳಲ್ಲಿ ನೀವು ಅವರನ್ನು ಬೀದಿಗೆ ಬಿಡುತ್ತಿರುವುದು ನೋಡಿದಾಗ ಇಂತಹ ಮಕ್ಕಳು ಬೇಕಾ ಎಂದು ಸಾಕಷ್ಟು ಪಾಲಕರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಅನಾಥಾಶ್ರಮಗಳಿಗೆ ಸೇರಿಕೊಂಡಿದ್ದಾರೆ. ಹಾಗಾಗಿ ಶಿಣದ ಜತೆ ಮಾನವೀಯ ಮೌಲ್ಯಗಳನ್ನು ತಾವೆಲ್ಲರೂ ಕಲಿತುಕೊಳ್ಳಬೇಕು ಎಂದರು.
ಕೆಪಿಸಿಸಿ ಉಪಾಧ್ಯ ಮುರಳೀಧರ ಹಾಲಪ್ಪ ಮಾತನಾಡಿ, ಮುಂದಿನ ದಿನದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ೇಮಾಭಿವೃದ್ಧಿ ಸಂವು ಇಡುಗಂಟು ಇಟ್ಟು ನೆರವು ನೀಡುವ ಕೆಲಸವನ್ನು ತಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ತಾಲೂಕು ಕುಂಚಿಟಿಗರ ೇಮಾಭಿವೃದ್ಧಿ ಸಂದ ಅಧ್ಯ ಜಯಣ್ಣ, ಶಿರಾ ಕುಂಚಶ್ರೀ ಪತ್ತಿನ ಸಹಕಾರ ಬ್ಯಾಂಕ್​ನ ರಂಗನಾಥ್​, ಸಹಾಯಕ ಪ್ರಾಧ್ಯಾಪಕ ಡಾ.ಡಿ.ಬಿ.ರವೀಂದ್ರನಾಥ್​, ಅರ ದಾಸೋಹ ಶಿಣಾಧಿಕಾರಿ ಸುಧಾಕರ್​, ಮುಖಂಡರಾದ ಯೋಗಾನಂದ್​, ನಿಂಗರಾಜು, ಗಂಗಣ್ಣ ಹಾಗೂ ಸಂದ ಪದಾಧಿಕಾರಿಗಳು ಇದ್ದರು.
17 ಎಂ ಎನ್​ ಕೋಟೆ 02
.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net