

ಪ್ರಮುಖ ಮುಖ್ಯಾಂಶಗಳು
ಮಧುಗಿರಿ : ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಗುರುವಾರ ರಾಜಕೀಯ ಭೀಷ್ಮ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿರುವುದು ಜಿಲ್ಲೆಯಲ್ಲಿ ರಾಜಕೀಯ ಮನ್ವಂತರಗಳಿಗೆ ಸಾಕ್ಷಿಯಾಗಲಿದೆಯೇ ಎಂಬ ಚರ್ಚೆ ಹುಟ್ಟು ಹಾಕಿದೆ.
ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು...ರಾಜಕೀಯದಲ್ಲಿ ಯಾರೂ ಶತೃಗಳೂ ಅಲ್ಲ ಮಿತ್ರರೂ ಅಲ್ಲ ಎಂಬುದಕ್ಕೆ ಈಗಾಗಲೇ ಬಹಳಷ್ಟು ನಿದರ್ಶನಗಳು ಕಣ್ಣಮುಂದಿವೆ. ಈಗ ಶಾಸಕ ಕೆ.ಎನ್.ರಾಜಣ್ಣರ ಪುತ್ರ ರಾಜೇಂದ್ರ ರಾಜಣ್ಣ ಹಿರಿಯ ರಾಜಕಾರಣಿ ಹೆಚ್.ಡಿ ದೇವೇಗೌಡ ರನ್ನು ಸೌಹಾರ್ಧಯುತವಾಗಿ
ಯಾಗಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದಿದ್ದು, ಪತ್ನಿ ಚೆನ್ನಮ್ಮ ನಿಧನಕ್ಕೆ ಸಾಂತ್ವನ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ದೇವೇಗೌಡರ ಪತ್ನಿ ಚೆನ್ನಮ್ಮನವರು ಮೃತಪಟ್ಟಿದ್ದ ಸಂದರ್ಭದಲ್ಲಿ ಶಾಸಕ ಕೆ.ಎನ್. ರಾಜಣ್ಣ ಹಾಸನದ ಹೊಳೇನರಸೀಪುರಕ್ಕ
ಭೇಟಿ
ನೀಡಿ ಅಂತಿಮ ದರ್ಶನ ಪಡೆದು ಬಂದಿದ್ದರು.
ಇದೊಂದು ಸೌಹಾರ್ಧಯುತ ಭೇಟಿ ಎಂದರೂ ತಾಲೂಕಿನಲ್ಲಿ ಇತ್ತೀಚೆಗೆ ರಾಜಕೀಯ ವಿಶ್ಲೇಷಣೆಗಳು ಹಲವಾರು ರೀತಿಯಲ್ಲಿ ನಡೆಯುತ್ತಿದ್ದು ಶಾಸಕ ರಾಜಣ್ಣ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ವದಂತಿ ಹಬ್ಬಿದೆ. ಇದಕ್ಕೆ ಪುಷ್ಠಿ ನೀಡುವಂತೆ ಒಕ್ಕಲಿಗ ಯುವ ನಾಯಕರೊಂದಿಗೆ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿರುವುದು
ರಾಜೇಂದ್ರ ರಾಜಕೀಯ ತಂತ್ರಗಾರಿಕೆ ಭಾಗವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಇತ್ತೀಚೆಗೆ ರಾಜಣ್ಣರನ್ನು ಮಂತ್ರಿ ಮಂಡಲಕ್ಕೆ ಪರಿಗಣಿಸದೇ ನಿರ್ಲಕ್ಷಿಸಿರುವುದು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಾತಿಗೆ ಕಿಮ್ಮತ್ತು ನೀಡದೆ ಇರುವುದು ತಾಲೂಕಿನಾಧ್ಯಂತ ಚರ್ಚೆಗೆ ಕಾರಣವಾಗಿದೆ. ಈ ಭೇಟಿಗೆ ಹೊಸ ರಾಜಕೀಯ ವ್ಯಾಖ್ಯಾನ ನೀಡಲಾಗುತ್ತಿದೆ.
ಕೆ.ಎನ್. ರಾಜಣ್ಣ ಜೆಡಿಎಸ್ ಸೇರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲದಿದ್ದರೂ, ಕ್ಷೇತ್ರದಲ್ಲಿ ಸೊರಗಿ ನಾವಿಕನಿಲ್ಲದಂತಾಗಿರುವ ಜೆಡಿಎಸ್ ನ ಒಂದು ಬಣ ಕೆಎನ್ನಾರ್ ಜೆಡಿಎಸ್ ಗೆ ಸೇರ್ಪಡೆಗೊಂಡಲ್ಲಿ ರೆಡ್ ಕಾರ್ಪೆಟ್ ಸ್ವಾಗತಕ್ಕೆ ಸಜ್ಜಾಗಿದೆ. ಈಗಾಗಲೇ ಈ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ಹರಿಯಬಿಟ್ಟಿದೆ. ರೆಕ್ಕೆಪುಕ್ಕಗಳನ್ನು ಕಟ್ಟಲಾಗಿದೆ. ಈ ಹಿಂದೆ ರಾಜಣ್ಣ ಬೆಳ್ಳಾವಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದಾಗ, ತುಮಕೂರು ಜಿಲ್ಲೆಯ 10 ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿತ್ತು. ಅವರು ಜೆಡಿಎಸ್ ಗೆ ಬಂದಲ್ಲಿ ಮತ್ತೆ ಅದೇ ಇತಿಹಾಸ ಪುನರಾವರ್ತನೆಯಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಜೆಡಿಎಸ್ ನ ಒಂದು ಬಣ ತೊಡಗಿಕೊಂಡಿದೆ.
ಭೇಟಿ ವೇಳೆ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಮೇಶ್ ಗೌಡ, ಮಧುಗಿರಿ ಪುರಸಭೆ ಮಾಜಿ ಅಧ್ಯಕ್ಷ ಲಾಲಾ ಪೇಟೆ ಮಂಜುನಾಥ್, ಕುರುಬರಹಳ್ಳಿ ಹರ್ಷ, ಬಂದ್ರೆಹಳ್ಳಿ ನಾಗಾರ್ಜುನ, ಹೊನ್ನಾಪುರ ದೀಪು, ರಘು ಮತ್ತಿತರರು ಇದ್ದರು.